ಸ್ನೇಹಕಿರಣ ಬೇಬಿ ಸಿಟ್ಟಿಂಗ್ ಮತ್ತು ಪ್ರಿ.ಕೆ.ಜಿ ನವೀಕರಣ ಕಟ್ಟಡ ಉದ್ಘಾಟನೆ

0

ಉಜಿರೆ: ಚಾರ್ಮಾಡಿ ರಸ್ತೆ ಸೈಂನ್ಟ್ ಸೆಬಾಸ್ಟಿಯನ್ ಇಂಡಸ್ಟ್ರೀಸ್ ಬಳಿ ಕಾರ್ಯಾಚರಿಸುತ್ತಿದ್ದ ಸ್ನೇಹಕಿರಣ ನರ್ಸರಿ ಶಾಲೆಯ ನವೀಕೃತ ಕಟ್ಟಡದ ಉದ್ಘಾಟನೆ ಮೇ. 28ರಂದು ನಡೆಯಿತು. ಈ ವರ್ಷದ ಧಾರಾಕಾರ ಮಳೆಗೆ ಕಟ್ಟಡಕ್ಕೆ ಮರ ಬಿದ್ದಿದ್ದು, ನವೀಕೃತ ಕಟ್ಟಡದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ನೆರವೇರಿಸಿದರು.

ಉಜಿರೆ ಸಂತ ಅಂತೋನಿ ಚರ್ಚ್ ಧರ್ಮಗುರು ಫಾ. ಅಬೆಲ್ ಲೋಬೊ ಆಶೀರ್ವಚನ ಮಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞರು ಡಾ. ಶಾಂತನು ಪ್ರಭು, ಇಂಜಿನಿಯರ್ ರಾಜೇಂದ್ರ ಎಂ., ನಿರ್ದೇಶಕ ಟಿ.ಜೆ. ಮೊರಾಸ್, ಶಾಲಾ ಸಂಚಾಲಕಿ ಜಾನೆಟ್ ಮೊರಾಸ್, ಜೈಸನ್ ಮೊರಾಸ್, ಜೋವಿಟ ಜೈಸನ್ ಮೊರಾಸ್, ಜಿನೋಯ್ ಕೆ.ಪಿ. ಅಂಟೋನಿ, ಅರುಣ್ ರೆಬೆಲ್ಲೋ, ಸುನಿಲ್ ಮೊರಾಸ್, ಇಂಜಿನಿಯರ್ ಸೂರ್ಯ ನಾರಾಯಣ, ಪ್ರವೀಣ್ ಫೆರ್ನಾಂಡಿಸ್ ಹಳ್ಳಿ ಮನೆ, ರೋಷನ್ ಡಿಸೋಜಾ, ಜಯ ಡಿಸೋಜಾ, ಜೊಸ್ಸಿ ಮೊರಾಸ್, ಉಜಿರೆ ಮತ್ತು ಬೆಳ್ತಂಗಡಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳು, ಉಜಿರೆ ಸ್ನೇಹ ಅಕೌಂಟ್ಸ್ ನ ಸಿಬ್ಬಂದಿಗಳು, ಮಕ್ಕಳ ಪೋಷಕರು, ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂಚಾಲಕಿ ಜಾನೆಟ್ ಮೊರಾಸ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಮಿಕ ವರ್ಗಕ್ಕೆ ಸನ್ಮಾನ ಗುತ್ತಿಗೆದಾರ ಜಿನೋಯ್, ಕಟ್ಟಡ ಕೆಲಸ ನಿರ್ವಹಿಸಿದ ಸೈಂನ್ಟ್ ಸೆಬಾಷ್ಟಿಯನ್ ಇಂಜಿನಿಯರಿಂಗ್ ವರ್ಕ್ಸ್ ಮಾಲಕ ಅಂಟೋನಿ ಟಿ.ಆರ್., ಇಲ್ಲಿಯ ಹಳೇ ವಿದ್ಯಾರ್ಥಿಗಳು, ಎಸ್. ಎಸ್. ಎಲ್. ಸಿ ಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಶಾರನ್, ಮತ್ತು ರಾಜ್ಯ ಕ್ಕೆ 6ನೇ ಸ್ಥಾನ ಗಳಿಸಿದ ಗಾಯನ ಇವರನ್ನು ಸನ್ಮಾನಿಸಲಾಯಿತು. ಶಾರನ್ ಪರವಾಗಿ ಅವಳ ತಾಯಿ ಶಿಕ್ಷಕಿ ಜಯ ಡಿಸೋಜಾ ಮತ್ತು ಗಾಯನ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ನೇಹ ಅಕೌಂಟ್ಸ್ ಸಿಬ್ಬಂದಿ ಅನುಪಮಾ ಸ್ವಾಗತಿಸಿದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು. ಜೋವಿಟ ಮೊರಾಸ್ ವಂದಿಸಿದರು.

LEAVE A REPLY

Please enter your comment!
Please enter your name here