ಬೆಳ್ತಂಗಡಿ: ಹೊಸಂಗಡಿ ಗ್ರಾಮ ಪಂಚಾಯತ್ ನ 3ನೇ ವಾರ್ಡ್ ಹರಿಪ್ರಸಾದ್. ಪಿ ಇವರ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಆನಂದ ಬಂಗೇರ ಕೊಡಿಂಗೇರಿ 183 ಮತಗಳ ಅಂತರದಲ್ಲಿ ಜಯ ಗಳಿಸಿರುತ್ತಾರೆ ಪಡೆದಿರುತ್ತಾರೆ.
ಒಟ್ಟು ಚಲಾವಣೆ ಆದ ಮತ 735, ಆನಂದ ಬಂಗೇರ 457 ಪಡೆದು ಜಯ ಗಳಿಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುನಿಲ್ ಶೆಟ್ಟಿ 274 ಮತ ಪಡೆದವರು. 4 ಮತ ಅಸಿಂಧು ಆಗಿತ್ತು.