ಕೊಯ್ಯೂರು: ಬರೆಮೇಲು ಕಾಂತಪ್ಪ ಗೌಡ ಹಾಗೂ ಅಶ್ವಿನಿರವರ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯ ಪ್ರಯುಕ್ತ ವಿಶೇಷ ಭಜನಾ ಕಾರ್ಯಕ್ರಮವು ನಡೆಯಿತು. ಭಜನಾ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಭಜನಾ ಮಂಡಳಿ ಆದೂರು ಪೇರಾಲ್ ಕೊಯ್ಯೂರು ಪುರುಷರ, ಮಕ್ಕಳ ಮತ್ತು ಮಹಿಳೆಯರ ಹಾಗೂ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ಕೊಯ್ಯೂರು ಇಲ್ಲಿಯ ಮಕ್ಕಳ ತಂಡಗಳ ಸದಸ್ಯರುಗಳು ಆಗಮಿಸಿ ಭಜನಾ ಸೇವೆಯನ್ನು ನಡೆಸಿಕೊಟ್ಟರು.

ಭಜನೆಗೆ ಆಗಮಿಸಿದಂತಹ ಎಲ್ಲಾ ಭಜಕ ವಿದ್ಯಾರ್ಥಿಗಳಿಗೆ ಕಾಂತಪ್ಪ ಗೌಡ ಹಾಗೂ ಮನೆಯವರು ಪುಸ್ತಕಗಳನ್ನು ನೀಡಿ ಗೌರವಿಸಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು. ಶ್ರೀ ಕೃಷ್ಣ ಭಜನಾ ಮಂಡಳಿ ಆದೂರು ಪೇರಾಲ್ ಕೊಯ್ಯೂರು ಇಲ್ಲಿಗೆ ಒಂದು ಮೇಜನ್ನು (ಟೇಬಲ್) ಕೊಡುಗೆಯಾಗಿ ನೀಡಿ ಮಂದಿರದ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಭಜನಾ ಮಂದಿರದ ಪದಾಧಿಕಾರಿಗಳೊಂದಿಗೆ ಕೈಜೋಡಿಸಿದರು.
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ. ಚಂದ್ರಶೇಖರ ಸಾಲ್ಯಾನ್, ಶ್ರೀ ಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ರೋಹಿತಾಶ್ವ ಉಮಿಯ ದರ್ಕಾಸು, ಗೌರವಾಧ್ಯಕ್ಷ ವಿಶ್ವನಾಥ ಗೌಡ, ಕಾರ್ಯದರ್ಶಿ ಓಬಯ್ಯ ನಾಯ್ಕ, ಕೋಶಾಧಿಕಾರಿ ಪಿ. ಬಾಲಕೃಷ್ಣ ಸಾಲ್ಯಾನ್, ಮಹಿಳಾ ತಂಡದ ಅಧ್ಯಕ್ಷೆ ಪೂರ್ಣಿಮಾ ಹೇಮಂತ್ ಗೌಡ, ಕಾರ್ಯದರ್ಶಿ ಸುಜಾತ ತಾರಾನಾಥ ಗೌಡ, ಕೊಯ್ಯೂರು ಶ್ರೀ ಪಂಚದುರ್ಗ ಭಜನಾ ಮಂಡಳಿಯ ಅಧ್ಯಕ್ಷ ದಿನೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.