ಎಸ್.ಕೆ.ಎಸ್.ಎಸ್.ಎಫ್ ಮದ್ದಡ್ಕ ಶಾಖೆ ವತಿಯಿಂದ ಯುನಿಟ್ ಕ್ಯಾಬಿನೆಟ್‌ ಮೀಟ್ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗೆ‌ ಸನ್ಮಾನ ಕಾರ್ಯಕ್ರಮ

0

ಕುವೆಟ್ಟು: ಎಸ್. ಕೆ. ಎಸ್. ಎಸ್. ಎಫ್ ಮದ್ದಡ್ಕ ಶಾಖೆಯ ಯುನಿಟ್ ಕ್ಯಾಬಿನೆಟ್ ಮೀಟ್ ಕಾರ್ಯಕ್ರಮ ಮದ್ದಡ್ಕದಲ್ಲಿ ಮೇ. 26ರoದು ನಡೆಯಿತು‌. ಮತ್ತು ಎಸ್. ಎಸ್. ಎಲ್. ಸಿ ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಮದ್ದಡ್ಕ‌ದ ಮಹಮ್ಮದ್ ಅಝೀಮ್ ಎಂಬ ವಿದ್ಯಾರ್ಥಿಗೆ ಗೌರವ ಸ್ಮರಣಿಕೆ‌ ಮತ್ತು ಗೌರವ ಧನ‌ ನೀಡಿ‌ ಸನ್ಮಾನಿಸಲಾಯಿತು.

ಶಾಖೆಯ‌ ಅಧ್ಯಕ್ಷ ಇಲಿಯಾಝ್ ಚಿಲಿಂಬಿ, ಪ್ರಧಾನ‌ ಕಾರ್ಯದರ್ಶಿ ನೌಶಾದ್ ಮದ್ದಡ್ಕ, ಕೋಶಾಧಿಕಾರಿ ಇಸ್ಮಾಯಿಲ್‌ ಕಿಂಗ್‌ಸ್ಟಾರ್, ಉಪಾಧ್ಯಕ್ಷರಾದ ಝಹೀರ್, ಎಸ್. ಡಿ. ಎಂ. ಸಿ ಕುವೆಟ್ಟು ಅಧ್ಯಕ್ಷರಾದ ಸಿರಾಜ್‌ ಚಿಲಿಂಬಿ, ಶಂಸುಲ್‌ ಉಲಮಾ, ಕ್ರಿಯಾ ಸಮೀತಿ ಮದ್ದಡ್ಕ ಅಧ್ಯಕ್ಷ ಶಾಕಿರ್ ಚಿಲಿಂಬಿ, ಉಪಾಧ್ಯಕ್ಷ ರಿಝ್ವಾನ್ ಮದ್ದಡ್ಕ, ಗೌರವಾಧ್ಯಕ್ಷ ಅಬ್ದುಲ್ಲಾ‌ ಮುಂಡೂರು, ಕೋಶಾಧಿಕಾರಿ ಮುಸ್ತಾಕ್ ಕಿಂಗ್‌ಸ್ಟಾರ್, ಪ್ರಧಾನ‌ ಕಾರ್ಯದರ್ಶಿ ರಝೀನ್ ಮದ್ದಡ್ಕ, ಜೊತೆ ಕಾರ್ಯದರ್ಶಿ ಸಫ್ವಾನ್ ಕಿನ್ನಿಗೋಳಿ ಮತ್ತು ಸ್ಥಳಿಯರಾದ ಸಾಜಿದ್ ಕುವೈಟ್, ನೌರೀಝ್ ಮದ್ದಡ್ಕ, ಹಮೀದ್ ನೇರಳಕಟ್ಟೆ, ತಲ್ ಮಿಝ್ ಮದ್ದಡ್ಕ, ರಾಫಿ ಚಿಲಿಂಬಿ, ರಿಫಾಅತ್ ಚಿಲಿಂಬಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಗ್ಗೆ ಎಸ್. ಕೆ. ಎಸ್. ಎಸ್. ಎಫ್ ಬೆಳ್ತಂಗಡಿ ವಲಯ ಕಾರ್ಯದರ್ಶಿ ನೌಶಾದ್ ಅಝ್ಹರಿ ಉಸ್ತಾದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀಝ್ ಅಶ್ಯಾಫೀ ಉಸ್ತಾದ್ ಸಂದೇಶ ಭಾಷಣ ಮಾಡಿದರು. ನೌಶಾದ್ ಮದ್ದಡ್ಕ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿ‌ದರು. ರಝೀಮ್ ಮದ್ದಡ್ಕ ಧನ್ಯವಾದ ಮಾಡಿದರು.

LEAVE A REPLY

Please enter your comment!
Please enter your name here