ಬೆಳ್ತಂಗಡಿ: ಏ.18ರಂದು ಶ್ರೀ ಅನಂತೇಶ್ವರ ಭಜನಾ ಮಂಡಳಿಯ ವಾರ್ಷಿಕ ಮಹಾಸಭೆ ಹಾಗೂ ಲೆಕ್ಕಪತ್ರ ಮಂಡನೆ ಮತ್ತು ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.
ಭಜನಾ ಮಂಡಳಿಯ 2025-26 ನೇ ಸಾಲಿನ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಪೋಸೊಟ್ಟು, ಕಾರ್ಯದರ್ಶಿಯಾಗಿ ತೇಜಸ್ ಗೌಡ ಶಾಂತಿನಗರ ಹಾಗೂ ಕೋಶಾಧಿಕಾರಿಯಾಗಿ ಹರೀಶ್ ಗೌಡ, ಉಪಾಧ್ಯಕ್ಷರಾಗಿ ಹರೀಶ್ ನಾಯ್ಕ ಕುದ್ದಂಟೆ, ಜತೆ ಕಾರ್ಯದರ್ಶಿಯಾಗಿ ಗಣೇಶ್ ಗೌಡ ಅನಂತೋಡಿ ಮತ್ತು ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ ಹರಿಪ್ರಸಾದ್ ಗೌಡ ಅರಣೆಮಾರು, ಸುಮಿತ್ ಆಚಾರ್ಯ ಅನಂತೋಡಿ, ವಿಘ್ನೇಶ್ ಗೌಡ ಅನಂತೋಡಿ, ಶಶಿಧರ ಪೂಜಾರಿ ಓಡಿಪ್ರೊಟ್ಟು, ಪ್ರವೀಣ್ ಗೌಡ ಆನಂತೋಡಿ ಹಾಗೂ ಸದಸ್ಯರನ್ನು ನೇಮಕ ಮಾಡಲಾಯಿತು.
ಈ ಸಭಾ ಕಾರ್ಯಕ್ರಮದಲ್ಲಿ ಅನಂತೇಶ್ವರ ಮಕ್ಕಳ ಕುಣಿತಾ ಭಜನಾ ತಂಡಕ್ಕೆ ತರಬೇತಿ ನೀಡುತ್ತಿರುವ ಗುರುಗಳಾದ ಸೌಮ್ಯ ರಾವ್ ಇವರಿಗೆ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ ನವೀನ್ ಗೌಡ ಕಂಬಳದಡ್ಡ ಇವರು ವಹಿಸಿದ್ದರು.
ಭಜನಾ ಮಂಡಳಿಯ ಕಾರ್ಯದರ್ಶಿ ವಿಘ್ನೇಶ್ ಗೌಡ ಅನಂತೋಡಿ ಇವರು ವಾರ್ಷಿಕ ಲೆಕ್ಕಾಚಾರ ಮಂಡನೆಯನ್ನು ಮಾಡಿದರು. ವೇದಿಕೆಯಲ್ಲಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ ಶ್ರೀ ಸೌಧ ಬೆಳಾಲು, ವ್ಯವಸ್ಥಾಪನ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುನ್ನಾಯ, ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ ಉಪ್ಪಾರು, ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ ಗೌಡ ಗಣಪನಗುತ್ತು,ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಬೆಳಾಲು ಮತ್ತು ವ್ಯವಸ್ಥಾಪನ ಸಮಿತಿಯ ಜತೆ ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಭಜನಾ ಮಂಡಳಿಯ ಸದಸ್ಯ ಹರೀಶ್ ನಾಯ್ಕ ಕುದ್ದಂಟೆ ಸ್ವಾಗತಿಸಿದರು. ದೇವಸ್ಥಾನದ ಕಛೇರಿ ಮೇಲ್ವಿಚಾರಕ ಶಿವಪ್ರಸಾದ್ ಗೊಲ್ಲ ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂಡಳಿಯ ಗೌರವ ಸಲಹೆಗಾರ ಜಾರಪ್ಪ ಗೌಡ ಅರಣೆಮಾರು ವಂದಿಸಿದರು.