ತೆಕ್ಕಾರು: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಾಜಾರು-ಜೋಡುಕಟ್ಟೆ ರಸ್ತೆ ಸಂಪೂರ್ಣ ಹಾಳಾಗಿ ಜಲ್ಲಿಕಲ್ಲುಗಳು ತೇಲಿವೆ. ಆದರೂ ಇದಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಈ ಕಡೆ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆಕ್ಕಾರು ಗ್ರಾಮದ ಬಾಜಾರು-ಜೋಡುಕಟ್ಟೆ ರಸ್ತೆ 700 ಮೀಟರ್ ಉದ್ದವಿರುವ ಜಿಲ್ಲಾ ಪಂಚಾಯತ್ ರಸ್ತೆ ಏಳು ವರ್ಷಗಳಿಂದ ಈ ರಸ್ತೆ ಯಾವುದೇ ರೀತಿಯ ಅಭಿವೃದ್ಧಿಯಾಗಲಿಲ್ಲ. ಈ ರಸ್ತೆಯಲ್ಲಿ ದಿನಕ್ಕೆ 6 ಬಸ್ ಗಳು ಹೋಗುತ್ತದೆ. ತೆಕ್ಕಾರು ಸೊಸೈಟಿ, ನ್ಯಾಯ ಬೆಲೆ ಅಂಗಡಿ, ಶಾಲೆಗೆ ಹೋಗಲು ತುಂಬಾ ಕಷ್ಟವಾಗುತ್ತದೆ. ಈ ರಸ್ತೆಯಲ್ಲಿ ಸುಮಾರು 200 ಮನೆಗಳ ಜನರು ಹೋಗುತ್ತಾರೆ.
ಈ ರಸ್ತೆಯನ್ನು ತಕ್ಷಣ ಸರಿಪಡಿಸಬೇಕು ಇಲ್ಲದಿದ್ದಾರೆ ಪತ್ರಿಭಟನೆ ಮಾಡುತ್ತೇವೆ ಎಂದು ತೆಕ್ಕಾರು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.ಹಳ್ಳಗುಂಡಿಗಳಿಂದ ಕೂಡಿದೆ. ರಸ್ತೆಯಲ್ಲಿ ಬಾರಿ ಗಾತ್ರದ ಗುಂಡಿಗಳು ಬಿದ್ದಿದ್ದು, ಮಳೆ ಬಂದಂತಹ ಸಂದರ್ಭದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು ಬೈಕ್ ಸವಾರರು ಬಿದ್ದು, ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರುವಂತಾಗಿವೆ.
ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಕನಿಷ್ಠ ರಸ್ತೆಯಲ್ಲಿನ ಹಳ್ಳ ಗುಂಡಿಗಳನ್ನು ಮುಚ್ಚಿಸುವಂತಹ ಕೆಲಸವನ್ನು ಸಹ ಮಾಡುತ್ತಿಲ್ಲ ಎಂದು ವಾಹನ ಸವಾರರು ಹಾಗೂ ತೆಕ್ಕಾರು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.