ಬೆಳ್ತಂಗಡಿ: ತಾಲೂಕಿನ ಬಂಡಾಜೆ ಸಿರಿಬೈಲು ನಿವಾಸಿ ವೆಂಕಪ್ಪ ಗೌಡ ಕೈಯಾಡಿ (74ವ) ಅವರು ವಯೋಸಹಜವಾಗಿ ಮೇ. 23ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಕಾರ್ಯದರ್ಶಿಯಾಗಿ ಬೆಳ್ತಂಗಡಿ, ಮಂಗಳೂರು, ಮೈಸೂರು, ಹಾಸನ, ಶಿರ ಸಹಿತ ಪ್ರಮುಖ ಕೇಂದ್ರಗಳಲ್ಲಿ 35 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.