ಧರ್ಮಸ್ಥಳದ ಯುವತಿ ಪಂಜಾಬ್ ನಲ್ಲಿ ನಿಗೂಢ ಸಾವು ಪ್ರಕರಣ: ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ? ಮನೆಯವರಿಂದ ದೂರು ದಾಖಲು

0

ಧರ್ಮಸ್ಥಳ: ಯುವತಿ ಏರೋಸ್ಪೇಸ್‌ ಉದ್ಯೋಗಿ ಪಂಜಾಬ್‌ನಲ್ಲಿ ಸಾವನ್ನಪ್ಪಿರುವ ಪ್ರಕರಣಕ್ಕೆ ಪೊಲೀಸರ ಮಾಹಿತಿ. ಪ್ರೇಮ ವೈಫಲ್ಯದಿಂದ ಆಕಾಂಕ್ಷ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿರುವ ಕುರಿತು ವರದಿಯಾಗಿದೆ. ಆಕಾಂಕ್ಷ ಪಗ್ವಾಡ ಕಾಲೇಜಿನ ಪ್ರೊ.ಮ್ಯಾಥ್ಯೂ ಅವರನ್ನು ಪ್ರೀತಿಸುತ್ತಿದ್ದರು. ಪ್ರೀತಿ ಯಾವುದೋ ಒಂದು ಕಾರಣಕ್ಕೆ ಮುರಿದು ಬಿದ್ದಿದೆ.

ಪ್ರಾಧ್ಯಾಪಕ ಮ್ಯಾಥ್ಯೂರನ್ನು ಭೇಟಿ ಮಾಡಲು ಹೋದಾಗ, ಇವರಿಬ್ಬರ ಮಧ್ಯೆ ಜಗಳ ನಡೆದಿದೆ. ನಂತರ ಆಕೆ ಆತ್ಮಹತ್ಯೆ ಮಾಡಿದ್ದಾಳೆ ಎಂದು ಪಂಜಾಬ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲೇಜಿಗೆ ಸರ್ಟಿಫಿಕೇಟ್‌ ತರಲೆಂದು ಹೋದಾಗ ಈ ವಿಚಾರಕ್ಕೆ ಫ್ರೊ.ಮ್ಯಾಥ್ಯೂ ಜೊತೆ ಆಕಾಂಕ್ಷ ಗಲಾಟೆ ಮಾಡಿದ್ದು, ನಂತರ ಮನನೊಂದು ಕಾಲೇಜಿನ ಕಟ್ಟಡದಿಂದ ಜಿಗಿದು ಸೂಸೈಡ್‌ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸದ್ಯಕ್ಕೆ ಪೊಲೀಸರು ಪ್ರೊ.ಮ್ಯಾಥ್ಯೂ ಅವರನ್ನು ವಿಚಾರಣೆ ಮಾಡುತ್ತಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.

ಕೇರಳದ ಕೊಟ್ಟಾಯಂ ಮೂಲದ ಲೆಕ್ಚರರ್ ಬಿಜಿಲ್ ಮ್ಯಾಥ್ಯೂ ಎಂಬಾತ ಆಕಾಂಕ್ಷಗೆ ತನ್ನ ವಿಭಾಗದ ಸರ್ಟಿಫಿಕೇಟ್ ನೀಡಲು ಸತಾಯಿಸುತ್ತಿದ್ದ, ಅಲ್ಲದೇ ಆತನಿಗೆ ಆಕಾಂಕ್ಷನ ಮೇಲೆ ಪ್ರೇಮಾಂಕುರವಾಗಿತ್ತು. ಇದೇ ಕಾರಣಕ್ಕಾಗಿ ಆತ ಸರ್ಟಿಫಿಕೇಟ್ ನೀಡಲು ಸತಾಯಿಸುತ್ತಿದ್ದುದಾಗಿ ತಿಳಿದುಬಂದಿದೆ.‌ ಸರ್ಟಿಫಿಕೇಟ್ ಪಡೆಯಲು ಹೋದ ದಿವಸ ಆತ ಕಾಲೇಜಿಗೆ ಬರದ‌ ಹಿನ್ನಲೆಯಲ್ಲಿ ಅವರಿಬ್ಬರ ನಡುವೆ ವಾಟ್ಸಾಪ್ ನಲ್ಲಿ ಚಾಟಿಂಗ್ ನಡೆದಿದೆ. ನನಗೆ ಸಿಕ್ಕಾಪಟ್ಟೆ ಟಾರ್ಚರ್ ಮಾಡಬೇಡ, ದಯವಿಟ್ಟು ಬಂದು ಸರ್ಟಿಫಿಕೇಟ್ ಕೊಡು, ಇಲ್ಲದಿದ್ದರೆ ಜಂಪ್ ಮಾಡಿ ಸಾಯುತ್ತೇನೆ ಅಂತ ಚಾಟಿಂಗ್ ಮಾಡಿರುವ ಮೆಸೇಜ್ ಬಗ್ಗೆಯೂ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಲೆಕ್ಚರರ್ ಬಿಜಿಲ್ ನ ಹೆಂಡತಿ ಮತ್ತು ಪುಟ್ಟ ಮಕ್ಕಳಿಬ್ಬರು ಪೊಲೀಸ್ ಠಾಣೆಗೆ ಆಗಮಿಸಿ ಆಕಾಂಕ್ಷ ಹೆತ್ತವರಲ್ಲಿ ಕೇಸ್ ನೀಡದಂತೆ ಮನವಿ ಮಾಡಿದ್ದಾರೆ. ಅಲ್ಲದೇ, ಆಕಾಂಕ್ಷ ಹಾಗೂ ಬಿಜಿಲ್ ನ ಹೆಂಡತಿ ನಡುವೆಯೂ ಚಾಟಿಂಗ್ ನಡೆದಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಮೇ. 21ರಂದು ಪಾರ್ಥೀವ ಶರೀರ ತವರಿಗೆ-ಅಂದೇ ಅಂತ್ರಕ್ರಿಯೆ ಆಕಾಂಕ್ಷ ತಂದೆಯ ಹೇಳಿಕೆಯಾಗಿದೆ.

LEAVE A REPLY

Please enter your comment!
Please enter your name here