ಬೆಳ್ತಂಗಡಿ: ಬೆಳಾಲು ಗ್ರಾಮದ ಏರ್ದೊಟ್ಟು ಮನೆಯ ಸುಮಿತ್ರಾ ಮತ್ತು ಅವರ ಮಕ್ಕಳಿಗೆ ನಾಯಿ ವಿಚಾರದಲ್ಲಿ ಗ್ರಾಮ ಪಂಚಾಯತ್ ನೀರು ನಿರ್ವಾಹಕ ಶಶಿಧರ್ ಎಂಬವರು ಹಲ್ಲೆ ನಡೆಸಿದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪ್ರಕರಣದ ಸಾರಾಂಶ: ಬೆಳಾಲು ಗ್ರಾ.ಪಂ. ನೀರು ನಿರ್ವಾಹಕ ಶಶಿಧರ ಎಂಬವರಿಗೆ ಸೇರಿದ ನಾಯಿ ಸುಮಿತ್ರಾರವರ ಮನೆಯ ನಾಯಿಗೆ ಕಚ್ಚಿ ಕೊಂದಿತ್ತು. ಈ ವಿಚಾರ ತಿಳಿಸಲು ಸುಮಿತ್ರಾ ಅವರು ತನ್ನ ಮನೆಯ ಎದುರಿನ ರಸ್ತೆಗೆ ಹೋಗಿ ಶಶಿಧರ ಅವರಿಗೆ ತಿಳಿಸಿದಾಗ ಮನೆಯಿಂದ ಹೊರಗೆ ಬಂದ ಶಶಿಧರ ಅವರು ನನ್ನ ನಾಯಿ ನಿಮ್ಮ ನಾಯಿಯನ್ನು ಕೊಂದದ್ದು ಅಲ್ಲ ಎಂದು ಏರು ಧ್ವನಿಯಲ್ಲಿ ಮಾತನಾಡಿ ಮಾನಕ್ಕೆ ಕುಂದು ತರುವ ರೀತಿಯಲ್ಲಿ ಎದೆಗೆ ಕೈ ಹಾಕಿ ದೂಡಿದಾಗ ಕೆಳಗೆ ಬಿದ್ದುದನ್ನು ನೋಡಿದ ಮಕ್ಕಳು ತಕ್ಷಣ ಬಂದು ಮೇಲಕ್ಕೆ ಎತ್ತಿ ಉಪಚರಿಸಿದಾಗ ಶಶಿಧರ್ ಮಕ್ಕಳ ಬಲ ಕೆನ್ನೆಗೆ ಕೈಯಿಂದ ಹೊಡೆದು ಕೈಯಿಂದ ದೂಡಿ ನಿನ್ನ ಮನೆಯಲಿ ಹೆಣ್ಣು ಮಕ್ಕಳೇ ಇರುವುದು ನಿಮ್ಮನ್ನು ಅತ್ಯಾಚಾರ ಮಾಡಿದರೂ ಕೇಳುವವರಿಲ್ಲವೆಂದು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದಿರುವ ಬಗ್ಗೆ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.