ಬೆಳ್ತಂಗಡಿ ಸ. ಐ.ಟಿ.ಐ 2025ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನ

0

ಬೆಳ್ತಂಗಡಿ: ಕೈಗಾಲಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಡಿ ಬರುವಂತಹ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನೀಡುವ ತರಬೇತಿಯಿಂದ ವಿದ್ಯಾರ್ಥಿಗಳ ಕೌಶಲ್ಯತೆ ಅಭಿವೃದ್ಧಿ ಹೊಂದಿ ಉದ್ಯಮಗಳಲ್ಲಿ ಹೆಚ್ಚಿನ ಉದ್ಯೋಗವಕಾಶಗಳು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಕ್ಕೆ ಸದಾವಕಾಶಗಳು ಇದ್ದು ಹಾಗೂ ಹೆಚ್ಚಿನ ವೇತನವನ್ನು ಪಡೆಯಲು ಅರ್ಹತೆ ಹೊಂದಿರುತ್ತಾರೆ.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಹೊಂದಿ ಸ್ವಯಂ ಉದ್ಯೋಗ ಮಾಡಲು ಅವಕಾಶವಿರುತ್ತದೆ. ಮತ್ತು ಸದರಿ ಸಂಸ್ಥೆಯಲ್ಲಿ ತರಬೇತಿ ಹೊಂದಿರುವ ತರಬೇತಿದಾರರಿಗೆ ಕೇಂದ್ರ ಸರ್ಕಾರದಿಂದ ಎನ್.ಟಿ.ಸಿ (National Trade Certificate) ದೃಢೀಕರಣ ಪತ್ರವನ್ನು ನೀಡಲಾಗುವುದು ಇದರಿಂದ ಎಲ್ಲಾ ದೇಶಗಳಲ್ಲಿ ಉದ್ಯೋಗ ಪಡೆಯಲು ಅವಕಾಶವಿರುತ್ತದೆ.

ಆದ್ದರಿಂದ ಪ್ರಸ್ತುತ ಆಗಸ್ಟ್ 2025ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಸ.ಕೈ.ತ.ಸಂಸ್ಥೆ ಮಾಲಾಡಿ, ಬೆಳ್ತಂಗಡಿ ಇಲ್ಲಿ ಎಸ್.ಎಸ್.ಎಲ್.ಸಿ. ಪಾಸಾದ ಅಭ್ಯರ್ಥಿಗಳಿಗೆ ಸದರಿ ಸಂಸ್ಥೆಯಲ್ಲಿ ಲಭ್ಯವಿರುವ ವೃತ್ತಿಗಳಾದ 1) M.R.A.C (Refrigeration and Air Conditioning Technician) 2) Fitter 3) Mechanic Electric Vehicle 4) Industrial Robotics and Digital Manufacturing Technician 5) Manufacturing Process Control And Automation 8) Virtual Analysis and Designer-FEM (Finite Element Method) 7) Engineering Design Technician 8) Coc Machining Technidan ವೃತ್ತಿಗಳಿಗೆ ಮೇ .9ರಿಂದ 28ರವರೆಗೆ ಇಲಾಖಾ ವೆಬ್ ಸೈಟ್: WWW.cite.karnataka.gov.in ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಸದರಿ ಸಮಯದಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಜೂ. 5ರಿಂದ 10ರವರೆಗೆ ಮೊದಲನೇ ಹಂತದ ಪ್ರವೇಶ ಮಾಡಿಕೊಳ್ಳಲಾಗುವುದು.

ತದನಂತರ ಖಾಲಿ ಉಳಿದ ಸ್ಥಾನಗಳಿಗೆ ಜೂ. 12ರಿಂದ ಆ. 31ರವರೆಗೆ Off line ನಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ಪ್ರಾಚಾರ್ಯರ ದೂರವಾಣಿ ಸಂಖ್ಯೆ 6361060652, 9611375614 ಮತ್ತು ಸಂಸ್ಥೆಯ ಸ್ಥಿರ ದೂರವಾಣಿ ಸಂಖ್ಯೆ 08256 200606 ನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here