ಕೊಕ್ಕಡ: ಶ್ರೀ ಸಿದ್ಧಿವಿನಾಯಕ ಅಸೋಸಿಯೇಟ್ಸ್ ಮತ್ತು ಲಾ ಚೇಂಬರ್ಸ್ ಕೊಕ್ಕಡ ಗ್ರಾಮ ಪಂಚಾಯತ್ ಕಚೇರಿಯ ಮುಂಬಾಗದಲ್ಲಿರುವ ಶ್ರೀ ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಮೇ. 16ರಂದು ಶುಭಾರಂಭಗೊಂಡಿದೆ.
ಶ್ರೀ ಸಿದ್ಧಿವಿನಾಯಕ ಅಸೋಸಿಯೇಟ್ಸ್ ರವರ ಪ್ರಧಾನ ಕಛೇರಿ ಬೆಳ್ತಂಗಡಿಯ ಸಬ್ ರಿಜಿಸ್ಟರ್ ಆಫೀಸ್ ನ ಮುಂಭಾಗದಲ್ಲಿದ್ದು, ಬೆಂಗಳೂರಿನ ಗಂಗಾನಗರದಲ್ಲಿ ಕೂಡ ಕಾರ್ಯನಿರ್ವಹಿಸುತ್ತಿದೆ.

ಇದೀಗ ಕೊಕ್ಕಡದ ಜನತೆಯ ಉಪಯೋಗಕ್ಕೆoದು ನೂತನವಾಗಿ ಆರಂಭಿಸಿದ್ದಾರೆ. ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಡಿಜಿಟಲ್ ಲ್ಯಾಂಡ್ ಸರ್ವೆ ಕನ್ಸಲ್ಟೆಂಟ್ ಮತ್ತು ಕಂಟ್ರಾಕ್ಟರ್ಸ್ ಅಡಿಯಲ್ಲಿ ಪ್ಲಾನ್ ಎಸ್ಟಿಮೇಶನ್, ಲ್ಯಾಂಡ್ ಅಂಡ್ ಬಿಲ್ಡಿಂಗ್ ವ್ಯಾಲ್ಯೂಯೇಷನ್, ಟು ಡಿ ಅಂಡ್ ತ್ರೀಡಿ ಡಿಸೈನ್, ವಾಸ್ತು ಸಲ್ಯೂಷನ್, ಟೋಟಲ್ ಸ್ಟೇಷನ್ ಸರ್ವೆ, ಡಿಜಿಪಿಎಸ್ ಸರ್ವೆ, ಕಾಂಟೂರ್ ಆಂಡ್ ಕ್ವಾಂಟಿಟಿ ಸರ್ವೆ, ರೋಡ್ ಸರ್ವೆ, ಮ್ಯಾಪಿಂಗ್ ಅಂಡ್ ಬಿಲ್ಡಿಂಗ್ ಮಾರ್ಕಿಂಗ್, ವಿನ್ಯಾಸ ನಕ್ಷೆ (9/11,ಫಾರ್ಮ್ 3), ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ (pmc ), ಲೇಔಟ್ ಸರ್ವೆ ಅಂಡ್ ಮಾರ್ಕಿಂಗ್, ಸರ್ಕಾರಿ ಕಾಮಗಾರಿಗಳ ಡಿಪಿಆರ್ ಮಾಡಿಕೊಡಲಾಗುವುದು. ಲಾ ಚೇಂಬರ್ಸ್ ಕೂಡ ಶುಭಾರಂಭಗೊಂಡಿದ್ಫು ಕಾನೂನು ಸಲಹೆ, ದಸ್ತಾವೇಜು ಬರಹಗಾರರು ಇಲ್ಲಿ ಲಭ್ಯವಿದ್ದಾರೆ ಎಂದು ಮಾಲಕ ಕೇಶವ ಬಂದಾರು ತಿಳಿಸಿದ್ದಾರೆ.