ಮುಂಡೂರು: ಮುಂಡೂರು ಗ್ರಾಮದ ಪಾವನನಡೆ ಪ್ರತಿಷ್ಠಾನ ಪಾಪಿನಡೆ ಗುತ್ತುವಿನಲ್ಲಿ ಮೇ. 16ರಂದು ಬೆಳಗ್ಗೆ ವೆಂಕಟೇಶ ಶಾಂತಿ ಶಂಭೂರು ಅವರ ನೇತೃತ್ವದಲ್ಲಿ ನಾಲ್ಕುಗುತ್ತು, ಬರ್ಕೆ ಗ್ರಾಮಗಳಿಗೆ ಸಂಬಂಧಪಟ್ಟ ಜೂಮ್ರ ಜುಮಾದಿ ದೈವಗಳ ಪುನರ್ ಪ್ರತಿಷ್ಠಾಪನೆ ನಡೆಯಿತು.

ಮೇ. 15ರಂದು ಬೆಳಗ್ಗೆ ಪಾಪಿನಡೆಗುತ್ತಿನ ಕುಟುಂಬಸ್ಥರ ಧರ್ಮ ಚಾವಡಿಯಲ್ಲಿ ಗಣಹೋಮ, ಮೂಲ ನಾಗಬನದಲ್ಲಿ ನಾಗಬ್ರಹ್ಮ ದೇವರಿಗೆ ತನುತಂಬಿಲ ಸೇವೆ, ಧರ್ಮಚಾವಡಿಯಲ್ಲಿ ದೈವಗಳಿಗೆ ಪಂಚಪರ್ವ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಜೂಮ್ರ ಜುಮಾದಿ ದೈವಸ್ಥಾನದ ಎದುರಲ್ಲಿ ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆ, ಸಪ್ತಶುದ್ದಿ ಶಿಲ್ಪವರ್ಣ, ಪಂಚಗವ್ಯ ಮೇಲನ ಸ್ವಸ್ತಿ ಪುಣ್ಯಾಹವಾಚನ, ರಾಕ್ಟೋಘ್ನ ಹೋಮ, ವಾಸ್ತುಪೂಜೆ, ವಾಸ್ತುಹೋಮ, ವಾಸ್ತು ಬಲಿ, ಪ್ರಕಾರ ಬಲಿ, ಪ್ರಕಾರ ಶುದ್ದಿ, ಬಿಂಬ ಶುದ್ದಿ, ಧಾನ್ಯಾಧಿವಾಸ, ಶಯನಾಧಿವಾಸ, ಅನ್ನಸಂತರ್ಪಣೆ ನಡೆಯಿತು.

ಮೇ. 16ರಂದು ಬೆಳಗ್ಗೆ ಗಣಪತಿಹೋಮ, ತೋರಣ ಮುಹೂರ್ತ, ಶಿಖರ ಪ್ರತಿಷ್ಠೆ ನವಕ ಕಲಶ ಪೂಜೆ, ನವಕ ಪ್ರಧಾನ ಹೋಮ, ಬೆಳಗ್ಗೆ ದೈವ ಪ್ರತಿಷ್ಠೆ ಪ್ರತಿಷ್ಠಾ ಹೋಮ, ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಿತು.

ಪ್ರತಿಷ್ಠಾನದ ಅಧ್ಯಕ್ಷರು ಮುಂಡೂರು ಶ್ರೀ ಕ್ಷೇತ್ರ ಮಂಗಳಗಿರಿಯ ಧರ್ಮದರ್ಶಿ ರಾಜೀವ, ಪ್ರತಿಷ್ಠಾನದ ಪದಾಧಿಕಾರಿಗಳು, ಕುಟುಂಬಸ್ಥರು, ನಾಲ್ಕು ಗ್ರಾಮಗಳ ಭಕ್ತರು ಭಾಗವಹಿಸಿದ್ದರು. ರಾತ್ರಿ ಜೂಮ್ರ, ಜುಮಾದಿ ದೈವಗಳ ನೇಮೋತ್ಸವ ನಡೆಯಲಿದೆ.