ಗುರುವಾಯನಕೆರೆ ಸಾಯಿರಾಂ ಫ್ರೆಂಡ್ಸ್‌ನಿಂದ ಸುಹಾಸ್ ಶೆಟ್ಟಿಗೆ ನುಡಿನಮನ

0

ಬೆಳ್ತಂಗಡಿ: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಸುಹಾಸ್ ಶೆಟ್ಟಿ ಅವರಿಗೆ ಗುರುವಾಯನಕೆರೆ ಬಂಟರ ಭವನದಲ್ಲಿ ಸಾಯಿರಾಂ ಫ್ರೆಂಡ್ಸ್ ವತಿಯಿಂದ ನುಡಿನಮನ ಕಾರ್ಯಕ್ರಮ ಮೇ. ೧೧ರಂದು ನಡೆಯಿತು.
ಸುಹಾಸ್ ಶೆಟ್ಟಿ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಶಾಸಕ ಹರೀಶ್ ಪೂಂಜ ಮಾತನಾಡಿ ಹಿಂದೂ ಸಮಾಜದ ಪರವಾಗಿ ಬಲವಾಗಿ ನಿಂತ ವ್ಯಕ್ತಿತ್ವ ಸುಹಾಸ್ ಶೆಟ್ಟಿಯವರದ್ದು. ನಾವು ಹಿಂದೂ ಸಮಾಜಕ್ಕೋಸ್ಕರ ಒಂದಾಗಿ ಬದುಕಬೇಕು. ನಮ್ಮ ಒಳಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇದ್ದರೂ ಹಿಂದೂಗಳು ನಾವೆಲ್ಲಾ ಒಂದೇ ಎನ್ನುವ ಭಾವನೆ ಇರಬೇಕು. ಹಿಂದೂ ಸಮಾಜಕ್ಕೆ ಶಕ್ತಿ ಸುಹಾಸ್ ಶೆಟ್ಟಿ. ಅವರ ಪಾರ್ಥೀವ ಶರೀರ ನೋಡಲು ಜನಸಾಗರ ಸೇರಿರುವುದನ್ನು ನೋಡಿದಾಗಲೇ ಗೊತ್ತಾಗುತ್ತದೆ ಅವರ ಸಾಧನೆ ಏನು ಎನ್ನುವುದು. ಅವರನ್ನು ಪ್ರೇರಣೆಯಾಗಿ ತೆಗೆದುಕೊಂಡು ನಾವು ಹಿಂದೂ ಸಮಾಜಕ್ಕೆ ಸಶಕ್ತರಾಗಿ ದುಡಿಯೋಣ. ದೇವರು ಸುಹಾಸ್ ಶೆಟ್ಟಿಯ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಹೇಳಿದರು.

ಹಿಂದೂ ಸಮಾಜಕ್ಕೆ ಅರ್ಪಣೆಯಾಗಿದೆ-ಶಶಿಧರ ಶೆಟ್ಟಿ: ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಮಾತನಾಡಿ ನಾನು ಸುಹಾಸ್ ಶೆಟ್ಟಿ ಬಗ್ಗೆ ಕೇಳಿದ್ದೆ. ಆದರೆ ಅವರನ್ನು ನಾನು ಪಾರ್ಥೀವ ಶರೀರದಲ್ಲಿಯೇ ಮೊದಲಾಗಿ ನೋಡಿದ್ದು. ಸುಹಾಸ್ ಶೆಟ್ಟಿಯವರ ಕೆಲಸ ಹಿಂದೂ ಸಮಾಜಕ್ಕೆ ಅರ್ಪಣೆಯಾಗಿದೆ. ಸುಹಾಸ್ ಶೆಟ್ಟಿಯದ್ದು ಕೊಲೆ ಅಲ್ಲ ಕಗ್ಗೊಲೆ. ಕಡೆ ಕ್ಷಣದವರೆಗೆ ಎದೆಗೆ ಎದೆ ಕೊಟ್ಟು ಹೋರಾಟ ಮಾಡಿದವರು. ಪ್ರತಿಯೊಬ್ಬರಿಗೂ ಸಂಘಟನೆಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅಂತಹವರನ್ನೇ ದೇವರು ಸೃಷ್ಟಿ ಮಾಡುತ್ತಾರೆ. ನಮ್ಮ ಮನೆಯ ತಂದೆ ತಾಯಿ ಸಹೋದರ ಸಹೋದರಿಯರ ಸುರಕ್ಷತೆಯನ್ನು ಮೊದಲು ನೋಡಿಕೊಂಡು ನಂತರ ಹಿಂದೂ ಸಂಘಟನೆಗೆ ಸೇರಬೇಕು ಎಂದು ಹೇಳಿದರು.

ಸಾಮರಸ್ಯಕ್ಕಾಗಿ ಶ್ರಮಿಸುತ್ತಿದ್ದರು -ಶಶಿರಾಜ್ ಶೆಟ್ಟಿ: ಉಡುಪಿಯಿಂದ ಕಾಸರಗೋಡಿನವೆರೆಗಿನ ಪ್ರತಿ ಹಿಂದೂ ಹುಡುಗರಿಗೂ ಮಾದರಿಯಾಗುವಂತಹ ಕೆಲಸವನ್ನು ಸುಹಾಸ್ ಶೆಟ್ಟಿ ಮಾಡುತ್ತಿದ್ದರು. ಈಗಿನ ಯುವಕರು ಹಾದಿ ತಪ್ಪುತ್ತಿರುವ ಕಾಲಘಟ್ಟದಲ್ಲಿ ಸುಹಾಸ್ ಅವರು ತಮ್ಮ ಸ್ವಂತ ಉದ್ಯಮದ ಜೊತೆ ಹಿಂದೂ ಸಮಾಜದ ಸಾಮರಸ್ಯಕ್ಕಾಗಿ ಶ್ರಮಿಸುತ್ತಿದ್ದರು. ಬಡ ಕುಟುಂಬದಿಂದ ಬಂದ ಅವರು ಸವ್ಯಕ್ತಪಡಿಸಿದ್ದಾರೆ. ಮಾಜ ಮುಖಿ ಕೆಲಸ ಮಾಡುತ್ತಾ ತಮ್ಮನ್ನು ತೊಡಗಿಸಿಕೊಂಡ ಸುಹಾಸ್ ವಯಸ್ಸಿನಲ್ಲಿಯೇ ನಮ್ಮನ್ನೆಲ್ಲ ಅಗಲಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹೇಳಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ ನಾವು ಒಂದು ಉತ್ತಮ ಕಾರ್ಯಕರ್ತನನ್ನು ಕಳೆದುಕೊಂಡಿzವೆ. ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ. ಆದರೆ ಕೆಲವರ ಸಾವು ಅವಿಸ್ಮರಣೀಯ ಎಂದರು. ಸುಹಾಸ್ ಶೆಟ್ಟಿಯವರ ಮಾವ ಚಂದ್ರಶೇಖರ್ ಶೆಟ್ಟಿ ಪುಳಿಮಜಲು ಸಹಿತ ಹಲವರು ಭಾಗವಹಿಸಿದ್ದರು.

ಭಾರತಿ ಶೆಟ್ಟಿ ಭಾಷಣ ವೈರಲ್-ಕೇಸು ದಾಖಲು: ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತಿ ಶೆಟ್ಟಿ ಅವರು ಮಾಡಿರುವ ಭಾಷಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾವುದೇ ವಸ್ತುಗಳನ್ನು ದರ ಸ್ವಲ್ಪ ಜಾಸ್ತಿ ಇದ್ದರೂ ನಮ್ಮವರ ಅಂಗಡಿಯಲ್ಲೇ ಖರೀದಿಸಿ. ಅದು ಹಿಂದೂ ಸಮುದಾಯಕ್ಕೆ ಶಕ್ತಿ ತುಂಬುತ್ತದೆ. ಅವರ ಮಾತನ್ನು ಕೇಳಿ ಅಲ್ಲಿ ದರ ಕಡಿಮೆಯಿದೆ ಎಂದು ಅವರ ಅಂಗಡಿಗಳಿಗೆ ಹೋಗಬೇಡಿ, ನಮ್ಮವರ ಅಂಗಡಿಯಲ್ಲೇ ಖರೀದಿಸಿ. ಗುರುವಾಯನಕೆರೆ ಪೇಟೆಯಲ್ಲಿ ಬೆಳ್ಳಂಬೆಳಗ್ಗೆ ನಮ್ಮವರ ರಿಕ್ಷಾ ಇರುವುದಿಲ್ಲ, ಅವರ ರಿಕ್ಷಾಗಳೇ ಇರುತ್ತದೆ ಹಿಂದೂ ರಿಕ್ಷಾ ಚಾಲಕರು ಒಬ್ಬರಾದರೂ ಬೆಳಗ್ಗಿನ ಜಾವ ಅಲ್ಲಿರಬೇಕು. ಈ ಮೂಲಕ ಹಿಂದೂಗಳನ್ನು ಜಾಗೃತರಾಗಿಸುವ ಮೂಲಕ ಅವರನ್ನು ಕಟ್ಟಿ ಹಾಕಬಹುದೇ ಹೊರತು ಇನ್ಯಾವ ರೀತಿಯಲ್ಲೂ ಅಲ್ಲ ಎಂದು ಭಾರತಿ ಶೆಟ್ಟಿ ಹೇಳಿದ್ದಾರೆ. ಅವರ ಹೇಳಿಕೆಗಳು ಭಾರೀ ವೈರಲ್ ಆಗಿದೆ. ಈ ಮಧ್ಯೆ ಓಡಿಲ್ನಾಳದ ಹರಿಪ್ರಸಾದ್ ಇರ್ವತ್ರಾಯ ಅವರು ನೀಡಿದ ದೂರಿನಂತೆ ಭಾರತಿ ಶೆಟ್ಟಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್. ೧೯೬(೧)(ಎ)ಯಡಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here