
ಬೆಳ್ತಂಗಡಿ: ಲಿಯೋ ಹದಿನಾಲ್ಕನೇ ಪೋಪರ ಆಹ್ವಾನದ ಮೇರೆಗೆ ಕಥೋಲಿಕ ಧರ್ಮಸಭೆಯು ಲೋಕ ಸಮಾಧಾನಕ್ಕಾಗಿ ಆಗಸ್ಟ್ 22ರಂದು ಉಪವಾಸ ಪರಾರ್ಥನ ದಿನವನ್ನಾಗಿ ಘೋಷಿಸಿದೆ. ಪ್ರಪಂಚ ಹಲವು ಕಡೆಗಳಲ್ಲಿ ಯುದ್ಧ ಮತ್ತು ಅಸಮಾಧಾನದ ಹಿನ್ನೆಲೆಯಲ್ಲಿಯೇ ಈ ಆಹ್ವಾನವನ್ನು ನೀಡಲಾಗಿದೆ.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಲಾರೆನ್ಸ್ ಮುಕ್ಕುಯಿಯವರು ಬೆಳ್ತಂಗಡಿ ಧರ್ಮಪ್ರಾಂತ್ಯದ ಎಲ್ಲಾ ಧರ್ಮಗುರುಗಳು, ಧರ್ಮಭಗಿನಿಯರು ಹಾಗು ಕ್ರೈಸ್ತಬಾಂಧವರು ನಾಳೆ ಉಪವಾಸ ದಿನವನ್ನಾಗಿ ಆಚರಿಸಿ ಲೋಕ ಸಮಾಧಾನಕ್ಕಾಗಿ ಪ್ರಾರ್ಥಿಸ ಬೇಕೆಂದು ಆಹ್ವಾನನೀಡಿದ್ದಾರೆ.