ಧರ್ಮಸ್ಥಳ: ಗ್ರಾಮದ ನಾರ್ಯ ನಿವಾಸಿ ಶಾಂತ (68) ಮೇ.12 ರಂದು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ನಡೆದಿದೆ. ಮನೆಯ ಹಿಂಬದಿಗೆ ಬಟ್ಟೆ ಒಗೆಯಲು ಸಾಬೂನು ತೆಗೆಯುವ ಸಂದರ್ಭದಲ್ಲಿ ಕಿಟಕಿಯಲ್ಲಿ ಯಾವುದೋ ವಿಷಕಾರಿ ಹಾವು ಎಡಗೈ ಕಿರು ಬೆರಳಿಗೆ ಕಚ್ಚಿರುತ್ತದೆ. ತಕ್ಷಣ ಮನೆ ಮದ್ದು ಮಾಡಿ ಯಾರಿಗೂ ತಿಳಿಸದೆ ಸುಮ್ಮನಿದ್ದರು. ಮಗನ ಮಗು ಕೈಯಲ್ಲಿ ರಕ್ತವನ್ನು ಬರುತ್ತಿರುವುದನ್ನು ಗಮನಿಸಿ ತಕ್ಷಣ ತಾಯಿಗೆ ತಿಳಿಸಿದ್ದಾಳೆ. ತನ್ನ ಗಂಡನಿಗೆ ಕರೆ ಮಾಡಿ ಉಜಿರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಮಗ ಅಕ್ಷಯ್, ಸೊಸೆ ಅಕ್ಷತ, ಹಾಗೂ ಅಂಶಿಕ ನನ್ನು ಅಗಲಿದ್ದಾರೆ.