ಬಂದಾರು: ಮೇ. 13ರಂದು ಕರ್ನಾಟಕ ಸರ್ಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು, ತಾಲೂಕು ಪಂಚಾಯತ್, ಬೆಳ್ತಂಗಡಿ, 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 17,555 ಮಾನವ ದಿನಗಳನ್ನು ಸೃಜಿಸಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಬಂದಾರು ಗ್ರಾಮ ಪಂಚಾಯತ್ ಆಡಳಿತ ಮಂಡಳಿ, ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ, ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಎನ್. ಭವಾನಿ ಶಂಕರ್, ತಾಲೂಕು ಪಂಚಾಯತ್ ಮೆನೇಜರ್ ಪ್ರಶಾಂತ್ ಬಳೆoಜ, ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ಸಹಾಯಕ ನಿರ್ದೇಶಕಿ ಸಫನಾ ಗೌರವ ಸ್ಮರಣಿಕೆ ಹಾಗೂ ಪ್ರಶoಸಾ ಪತ್ರ ನೀಡಿ ಗೌರವಿಸಿದರು.
ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ, ಸಿಬ್ಬಂದಿ ಪ್ರವೀಣ್, ನರೇಗಾ ಯೋಜನೆಯ ತಾಂತ್ರಿಕ ಸಹಾಯಕ ಅಭಿಯಂತರರು (ಸಿವಿಲ್) ಶರಣ್ ರೈ, ತಾಂತ್ರಿಕ ಸಹಾಯಕಿ ಪ್ರಾರ್ಥನ ಪ್ರಶಸ್ತಿ ಸ್ವೀಕರಿಸಿದರು.