ಮಾಜಿ ಶಾಸಕ ವಸಂತ ಬಂಗೇರರ ಪ್ರಥಮ ಪುಣ್ಯಸ್ಮರಣೆ ಪ್ರಯುಕ್ತ ಶ್ರೀ ಗುರುನಾರಾಯಣ ಮೂರ್ತಿಗೆ ಬೆಳ್ಳಿ ಕಿರೀಟ ಸಮರ್ಪಣೆ

0

ಬೆಳ್ತಂಗಡಿ: ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ ಕೆ. ವಸಂತ ಬಂಗೇರರ ಒಂದನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಮೇ. 8ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಬ್ರಹ್ಮಶ್ರೀ ನಾರಾಯಣ ಗುರು ಮೂರ್ತಿಗೆ ಬೆಳ್ಳಿ ಕಿರೀಟವನ್ನು ಬಂಗೇರ ಕುಟುಂಬದ ವತಿಯಿಂದ ಅವರ ಪತ್ನಿ ಬಿಲ್ಲವ ಮಹಿಳಾ ವೇದಿಕೆಯ ಸ್ಥಾಪಕ ಅಧ್ಯಕ್ಷೆ ಸುಜಿತಾ ವಿ. ಬಂಗೇರ ಅರ್ಪಿಸಿದರು.

ಬಂಗೇರರ ಅಳಿಯ ಧರ್ಮವಿಜೇತ್, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಅಪರ ಸರಕಾರಿ ವಕೀಲ ಮನೋಹರ ಕುಮಾರ್ ಇಳಂತಿಲ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಅನೂಪ್ ಬಂಗೇರ, ಅರ್ಚಕ ರಘುನಾಥ ಶಾಂತಿ ಉಪಸ್ಥಿತರಿದ್ದರು. ಮೊದಲು ಗುರದೇವರಿಗೆ ವಿಶೇಷ ಪೂಜೆ ಜರಗಿತು.

LEAVE A REPLY

Please enter your comment!
Please enter your name here