ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್, ಅರಿವು ಕೇಂದ್ರ ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯ, ಮಾಹಿತಿ ಕೇಂದ್ರದ ವತಿಯಿಂದ ಓದುವ ಬೆಳಕು ಕಾರ್ಯಕ್ರಮದಡಿ “ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ”ದ ಉದ್ಘಾಟನಾ ಕಾರ್ಯಕ್ರಮ ಮೇ. 5ರಂದು ನಡೆಯಿತು.
ಧರ್ಮಸ್ಥಳ ಜಮಾ ಉಗ್ರಾಣದ ಹಿರಿಯ ಮುತ್ಸದಿ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರೂ ಆದ ಬಿ. ಭುಜಬಲಿ ಉದ್ಘಾಟನೆ ನೆರವೇರಿಸಿ, ಚಿಕ್ಕದಿನಿಂದಲೇ ಮನೆಯಿಂದಲೇ ಸಂಸ್ಕಾರ ಬೆಳೆಯಬೇಕು. ಮೊಬೈಲ್, ಟಿ.ವಿ. ಗಳಿಂದ ದೂರವಿರುವಂತೆ, ಪುಸ್ತಕ ಓದಿದರೆ ಮಸ್ತಕದಲ್ಲಿ ಉಳಿಯುವುದು ಹಾಗೂ ಬೇಸಿಗೆ ಶಿಬಿರದ ಮಹತ್ವದ ಬಗ್ಗೆ ಉತ್ತಮವಾಗಿ ಮಕ್ಕಳ ಮನಮುಟ್ಟುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಪಂಚಾಯತ್ ಅಧ್ಯಕ್ಷೆ ವಿಮಲ, ಲೆಕ್ಕ ಸಹಾಯಕಿ ಪ್ರಮೀಳಾ, ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಡಾ. ದೇವಿ ಪ್ರಸಾದ್ ಬೊಳ್ಮ, ಎಂ.ಬಿ.ಕೆ ಚಂದ್ರಾವತಿ ಪಾಲ್ಗೊಂಡಿದ್ದರು. ಗ್ರಂಥಾಲಯ ಮೇಲ್ವಿಚಾರಕರು ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಸುಚಿತ್ರ ವಂದಿಸಿದರು.