ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಿಜಿಸ್ಟರ್ ಧರ್ಮಸ್ಥಳ ಹಾಗೂ ಸಮುದಾಯ ಅಭಿವೃದ್ಧಿ ವಿಭಾಗದ ವತಿಯಿಂದ ಶ್ರೀ ನಾಗ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಸಾನಿಧ್ಯ ಕ್ಷೇತ್ರ ನಾಗಚಾವಡಿ, ಗುಂಪಲಾಜೆ , ಪಣೆಜಾಲು, ಓಡಿಲ್ನಾಳ ಗ್ರಾಮದ ಪಂಚಕಲ್ಯಾಣ ಮಹಾ ಮಹೋತ್ಸವದ ಕಾರ್ಯ ಚಟುವಟಿಕೆ ಕಾರ್ಯದ ಬಗ್ಗೆ ಮಂಜೂರಾದ 1ಲಕ್ಷ ಚೆಕ್ ವಿತರಣೆ ಮಾಡಲಾಯಿತು.
ತಾಲೂಕಿನ ಯೋಜನಾಧಿಕಾರಿ ಅಶೋಕ್ ರವರು ಚೆಕ್ ವಿತರಣೆ ಮಾಡಿದರು. ಶ್ರೀ ನಾಗರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಸಾನಿಧ್ಯ ಕ್ಷೇತ್ರದ ಟ್ರಸ್ಟ್ ನ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಕೋಶಾಧಿಕಾರಿ ಶೈಲೇಶ್, ಸದಸ್ಯರಾದ ಶಂಕರ ಗಾಣಿಗ, ವಾರ್ಷಿಕ ನೇಮೋತ್ಸವ ಸಮಿತಿಯ ಅಧ್ಯಕ್ಷ ಕೆ. ಶಶಿಧರ್ ಹೆಗ್ಡೆ, ಉಪಾಧ್ಯಕ್ಷೆ ಆಶಾ, ಸದಸ್ಯೆ ನಳಿನಿ, ವಲಯದ ಮೇಲ್ವಿಚಾರಕಿ ಯಶೋಧ ಗುರುವಾಯನಕೆರೆ, ಒಕ್ಕೂಟದ ಅಧ್ಯಕ್ಷ ನಾಗೇಶ್ ರವರು ಉಪಸ್ಥಿತರಿದ್ದರು.