ಮೊಗ್ರು: ಮೇ. 3ರಂದು ಜೈ ಶ್ರೀ ರಾಮ್ ಸೇವಾ ಟ್ರಸ್ಟ್ ಅಲೆಕ್ಕಿ – ಮುಗೇರಡ್ಕ ಇದರ ಶ್ರೀ ರಾಮ ಶಿಶು ಮಂದಿರಕ್ಕೆ ಉದ್ಯಮಿ ಮೋಹನ್ ಕುಮಾರ್ ಲಕ್ಷ್ಮೀ ಇಂಡಸ್ಟ್ರಿಸ್ ಉಜಿರೆ, ಇವರು ಭೇಟಿ ನೀಡಿ ಸುಮಾರು 3 ವರ್ಷದ ಹಿಂದೆ ಆರಂಭಗೊಂಡು, ಧಾರ್ಮಿಕ ಮತ್ತು ರಾಷ್ಟ್ರೀಯತೆಯ ಮನೋಭಾವನೆ, ಆಧುನಿಕ ಶಿಕ್ಷಣ ನೀಡುವಂತಹ ಶ್ರೀ ರಾಮ ಶಿಶು ಮಂದಿರದ ಟ್ರಸ್ಟ್ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಸಲಹೆ ಸೂಚನೆ ನೀಡಿ ಶಿಶು ಮಂದಿರದ ಅಭಿವೃದ್ಧಿಗೆ ಸಹಕರಿಸುವ ಭರವಸೆ ನೀಡಿ ಸಂಘದ ಕಾರ್ಯಾಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀರಾಮ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಉದಯಭಟ್ ಕೊಳಬ್ಬೆ, ಅಧ್ಯಕ್ಷ ರಮೇಶ್ ಗೌಡ ನೆಕ್ಕರಾಜೆ, ಸಂಚಾಲಕರಾದ ಅಶೋಕ್, ವರುಣ್ , ಪ್ರವೀಣ್, ಗಣೇಶ್ ಮತ್ತು ಮುಖ್ಯ ಮಾತಾಜಿ ಪುಷ್ಪಲತಾ ಇವರು ಉಪಸ್ಥಿತರಿದ್ದರು.