ಅರಸಿನಮಕ್ಕಿ: ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಸರಕಾರಿ ಪ್ರೌಢ ಶಾಲೆ ಅರಸಿನಮಕ್ಕಿಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಪರೀಕ್ಷೆಗೆ ಹಾಜರಾದ 38 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜೇತ್ ಎಸ್. ಶೆಟ್ಟಿ 612, ತನುಶ್ರೀ 607, ಅನುಷಾ 601, ಸುಜಾತ 579, ವಿಜೇತ 572, ಶ್ರವಂತ 568, ಲಾವಣ್ಯ 566, ಸ್ನೇಹ 560, ಜನನಿ 557, ಸ್ವಸ್ತಿ 547, ಅವನಿ ಕುಮಾರಿ 539 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಶಾಲೆಯಲ್ಲಿ ದೈಹಿಕ ಶಿಕ್ಷಕರು ಸೇರಿದಂತೆ 3 ಶಿಕ್ಷಕಿಯರು ಮಾತ್ರ ಇದ್ದು ಗೌರವ ಶಿಕ್ಷಕರನ್ನು ನೇಮಿಸಿ ಅತ್ಯುತ್ತಮ ಫಲಿತಾಂಶ ಬಂದಿದೆ ಎನ್ನುತ್ತಾರೆ ಆಡಳಿತ ಮಂಡಳಿಯವರು.