
ನಡ: ಎ. 4ರಂದು ನಡ ಗ್ರಾಮದಲ್ಲಿ ಬಿಲ್ಲವ ಬಾಂಧವರ ವಾರ್ಷಿಕ ಗುರುಪೂಜೆ ಮತ್ತು ಮಹಾಸಭೆ ಕಾರ್ಯಕ್ರಮ ಶ್ರೀ ಗುರುನಾರಾಯಣ ಸ್ಡಾಮಿ ಸೇವಾ ಸಂಘ ನಡ ಅಧ್ಯಕ್ಷ ವೀರಪ್ಪ ಪೂಜಾರಿ ಕೊಟ್ಲಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಬಹಳ ಸಂಭ್ರಮದಿಂದ ಜರುಗಿತು.

ಮುಖ್ಯ ಅತಿಥಿಗಳಾಗಿ ಶ್ರೀ ಗುರುನಾರಾಯಣ ಸ್ಡಾಮಿ ಸೇವಾ ಸಂಘ ಬೆಳ್ತಂಗಡಿ ನಿರ್ದೇಶಕ ಗುರುರಾಜ್ ಗುರಿಪಳ್ಳ, ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಗೌರವಾಧ್ಯಕ್ಷ ಕೆ. ಹರೀಶ್ ಕುಮಾರ್, ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ಅಧ್ಯಕ್ಷ ಎಮ್. ಕೆ. ಪ್ರಸಾದ್, ಯುವವಾಹಿನಿ ಘಟಕ ಬೆಳ್ತಂಗಡಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಲಾಯಿಲ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ವಸಂತಿ ವಸಂತ ಕುತ್ರೊಟ್ಟು, ಶ್ರೀ ಗುರುನಾರಾಯಣ ಸ್ಡಾಮಿ ಸೇವಾ ಸಂಘ ಬೆಳ್ತಂಗಡಿ ಮಾಜಿ ನಿರ್ದೇಶಕ ದೇವೇಂದ್ರ ಪೂಜಾರಿ ಕುದುಪುಲ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹರಿಶ್ಚಂದ್ರ ಶಾಂತಿ ಅರ್ಚಕರು ಗುರುಪೂಜೆಯನ್ನು ನೆರವೇರಿಸಿದ ಬಳಿಕ ಸ್ತಾಪಕ ಅಧ್ಯಕ್ಷ ಜಯಕುಮಾರ್ ಸುರ್ಯ ಪ್ರಾಸ್ಥಾವಿಕವಾಗಿ ಮಾತುಗಳನ್ನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಕೆ. ಭಂಡಾರಿಕೋಡಿ ವರದಿ ಮಂಡಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಹಾಗೂ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಬಿಲ್ಲವ ಸಂಘದ ಉಪಾಧ್ಯಕ್ಷ ದಿವಾಕರ ಸಾಲ್ಯಾನ್ ಸುರ್ಯ, ಮಹಿಳಾ ಕಾರ್ಯದರ್ಶಿ ಚಿತ್ರಾವತಿ ಭಂಡಾರಿಕೋಡಿ, ಗೀತಾ ಯಶೋಧರ ಕೇಳ್ತಾಜೆ, ಗೌರವ ಸಲಹೆಗಾರರಾದ ರಮೇಶ್ ಕೋಟ್ಯಾನ್ ಕುತ್ರೊಟ್ಟು, ಅಣ್ಣಿ ಪೂಜಾರಿ ಕುತ್ರೊಟ್ಟು, ಶುಭಾಕರ ಕೆ.ಎಮ್., ಗುರುವಪ್ಪ ಪೂಜಾರಿ ಕೂಡೇಲು, ಕೃಷ್ಣಪ್ಪ ಪೂಜಾರಿ ಕುದುಪುಲ, ಜಯಾನಂದ ಕೂಡೇಲು ಮತ್ತು ಭಜನಾ ಸಂಚಾಲಕರಾದ ಜಗದೀಶ್ ನಡ, ಸೌಮ್ಯ ಹರೀಶ್ ಪಣೆಕ್ಕಲ, ಇವರು ಸಭೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಅನನ್ಯ ಹೊಕ್ಕಿಲ ಪ್ರಾರ್ಥಿಸಿದರು. ಜಯಾನಂದ ಅಂಕಾಜೆ ನಿರೂಪಿಸಿದರು. ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಶ್ರೀ ಗುರುನಾರಾಯಣ ಸ್ಡಾಮಿ ಸೇವಾ ಸಂಘ ನಡ ಇದರ ಅಧ್ಯಕ್ಷರಾಗಿ ದಿವಾಕರ ಸಾಲ್ಯಾನ್ ಸುರ್ಯ, ಉಪಾಧ್ಯಕ್ಷರಾಗಿ ವಸಂತಿ ವಸಂತ ಕುತ್ರೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಿ ಹೊಕ್ಕಿಲ, ಕೋಶಾಧಿಕಾರಿಯಾಗಿ ಸತೀಶ್ ಪೂಜಾರಿ ಹೊಕ್ಕಿಲ, ಜೊತೆ ಕಾರ್ಯದರ್ಶಿಯಾಗಿ ಗಿರೀಶ್ ಕೋಡಿ ಹಾಗೂ ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷರಾಗಿ ಚಿತ್ರಾವತಿ ಭಂಡಾರಿಕೋಡಿ, ಕಾರ್ಯದರ್ಶಿ ಅನನ್ಯಾ ಹೊಕ್ಕಿಲ, ಜೊತೆಕಾರ್ಯದರ್ಶಿ ಧನ್ಯಾ ಚಂದ್ಕೂರು ಮತ್ತು ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾಗಿ ಜಗದೀಶ್ ನಡ, ಉಪಾಧ್ಯಕ್ಷರಾಗಿ ಚಂದ್ರಹಾಸ ಚಂದ್ಕೂರು, ಕಾರ್ಯದರ್ಶಿಯಾಗಿ ರೋಹಿತ್ ಕುತ್ರೊಟ್ಟು ಇವರು ಆಯ್ಯೆಯಾದರು. ಮೀನಾಕ್ಷಿ ಕೆ. ಧನ್ಯವಾದವಿತ್ತರು.