ಬೆಳ್ತಂಗಡಿ: 2024-25ನೇ ಸಾಲಿನ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಮೌಲ್ಯಮಾಪನದ ಫಲಿತಾಂಶವು ಪ್ರಕಟವಾಗಿದ್ದು ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯು ಶೇ. 98.46 ಫಲಿತಾಂಶವನ್ನು ಪಡೆದಿರುತ್ತದೆ.
ವಿದ್ಯಾರ್ಥಿನಿ ಚೈತನ್ಯ ಯಜ್ಞಶ್ ರೈ 617 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಸನಾ ಮರಿಯಾಮ್ 614 ಅಂಕ, ರಕ್ಷಾ ಎನ್. 612 ಅಂಕ ಪಡೆದುಕೊಂಡಿರುತ್ತಾರೆ.
ಪರೀಕ್ಷೆ ಬರೆದ 65 ವಿದ್ಯಾರ್ಥಿಗಳಲ್ಲಿ 27 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 28 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಶಾಲಾ ಸಂಚಾಲಕ ಫಾ. ವಾಲ್ಟರ್ ಓಸ್ವಲ್ಡ್ ಡಿಮೆಲ್ಲೋ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಫಾ ಕ್ಲಿಫರ್ಡ್ ಪಿಂಟೋರವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದವನ್ನು ಅಭಿನಂದಿಸಿದರು.