
ಮಚ್ಚಿನ: ಬೆಳ್ತಂಗಡಿ ತಾಲೂಕು ಇತಿಹಾಸ ಪ್ರಸಿದ್ಧ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಜಿರ್ನೋದ್ಧಾರದ ಕೆಲಸವು ನಡೆಯುತ್ತಿದ್ದು ಇದರ ಧ್ವಜಸ್ತಂಭದ ವೃಕ್ಷ ಮುಹೂರ್ತವು
ನೂತನ ಧ್ವಜಸ್ತಂಭದ ನಿರ್ಮಾಣದ ಕಾಮಗಾರಿಯ ಪೂರ್ವಭಾವಿಯಾಗಿ ಮೇ. 2ರಂದು ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ದೇರಬೈಲು ಡಾ. ಶಿವಪ್ರಸಾದ ತಂತ್ರಿಗಳ ನೇತೃತ್ವದಲ್ಲಿ ತಣ್ಣೀರುಪಂತ ಗ್ರಾಮದ ಅಳಕ್ಕೆಯ, “ಅಳಕ್ಕೆ ಕುಟುಂಬಸ್ಥರು ಮತ್ತು ಬೈಲಿನ ಸಮಸ್ತರು” ದಾನವಾಗಿ ನೀಡುವ ಮರದ ವೃಕ್ಷ ಮುಹೂರ್ತ ನಡೆಯಿತು.

ಶ್ರೀ ಕ್ಷೇತ್ರ ಬಳ್ಳಮಂಜ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಡಾ. ಎಂ ಹರ್ಷ ಸಂಪಿಗೆತ್ತಾಯ, ಹಿರಿಯ ವಕೀಲರು ಬದರಿನಾಥ್ ಸಂಪಿಗೆತ್ತಾಯ, ಶ್ಯಾಮ್ ಪ್ರಸಾದ್, ಸತೀಶ್ ಕಾರಂದೂರು, ಪ್ರಮೋದ್ ಕುಮಾರ್, ನಾರಾಯಣ ಪೂಜಾರಿ, ದೇವಸ್ಥಾನದ ವ್ಯವಸ್ಥಾಪಕ ಬಾಲಣ್ಣ ಗ್ರಾಮಸ್ಥರು, ಭಕ್ತಾದಿಗಳು ಮೊದಲಾದ ಗಣ್ಯರು ಭಾಗಿಯಾಗಿದ್ದರು.