
ಉಜಿರೆ: ಓಡಲ ಚಾಮುಂಡಿ ನಗರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಪಿ. ರಾಜಗೋಪಾಲ ಯಡಪಡಿತ್ತಾಯರ ನೇತೃತ್ವದಲ್ಲಿ ಎ. 29ರಂದು ಪ್ರತಿಷ್ಠಾ ವರ್ಧಂತ್ಯುತ್ಸವ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಬೆಳಿಗ್ಗೆ ಪಂಚಗವ್ಯ, ಪುಣ್ಯಾಹ, ಕಲಶ ಪ್ರತಿಷ್ಟೆ, ಗಣಪತಿ ಹೋಮ, ಕಲಶಾಭಿಷೇಕ, ಚಾಮುಂಡಿ ನಗರ ಶ್ರೀ ಶಿವ ಪಾರ್ವತಿ ಭಜನಾ ಮಂಡಳಿ ಮತ್ತು ಮಾಚಾರು ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ ಪರ್ವ, ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ಮಹಾ ಪೂಜೆ, ರಾತ್ರಿ ಭಂಡಾರ ತೆಗೆದು ದೈವಕ್ಕೆ ಎಣ್ಣೆ ಬೂಳ್ಯ ಬಳಿಕ ಚಂದ್ಕುರು ಧರಿತ್ರಿ ಕಲಾವಿದರಿಂದ ಮಹಿಷ ಮರ್ದಿನಿ ರೂಪಕ ನಡೆಯಿತು. ನಂತರ ಶ್ರೀ ವ್ಯಾಘ್ರ ಚಾಮುಂಡಿ ನೇಮೋತ್ಸವ ಜರಗಿತು. ಶ್ರೀ ವ್ಯಾಘ್ರಚಾಮುಂಡಿ ಸೇವಾ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಶೆಟ್ಟಿ, ಸ್ಥಾಪಕ ಅಧ್ಯಕ್ಷ ಎಂ. ಜಿ. ಶೆಟ್ಟಿ, ಕಾರ್ಯದರ್ಶಿ ಪರಮೇಶ್ವರ, ಉಪಾಧ್ಯಕ್ಷ ಹರೀಶ್ ಕಾವ, ಕೋಶಾಧಿಕಾರಿ ಸುರೇಶ್ ಆಚಾರ್, ಟ್ರಷ್ಟಿಗಳಾದ ಶ್ರೀನಿವಾಸ ಗೌಡ ಮಧುರ, ವಿದ್ಯಾ ಕುಮಾರ್ ಕಾಂಚೋಡು, ವಿನಯಚಂದ್ರ ಬೆಳಕು, ಸುರೇಶ್ ಗೌಡ ಕೂಡಿಗೆ, ಚಿತ್ರೇಶ್ ಶೆಟ್ಟಿ, ಅಣ್ಣಿ ಗೌಡ ಮೈಂದ್ರೇಲ್, ವಿಶಾಲಾಕ್ಷಿ ರಾಮಣ್ಣ ನಾಯ್ಕ, ಖಾಯಂ ಆಹ್ವಾನಿತರಾದ ಪದ್ದಣ್ಣ ಗೌಡ, ಪುಷ್ಪ ಶ್ರೀನಿವಾಸ ಗೌಡ, ಪ್ರತಿಷ್ಠಾ ವರ್ಧಂತ್ಯುತ್ಸವ ಸಮಿತಿ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಯೋಜಜಕರು, ಊರವರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಿದರು.