
ಉಜಿರೆ: ಸಂತ ಅಂತೋನಿ ಚರ್ಚ್ ನಲ್ಲಿ ಎ. 27ರಂದು 13 ಮಕ್ಕಳಿಗೆ ಪರಮ ಪ್ರಸಾದ ನಡೆಯಿತು. ಫಾ. ಅಬೆಲ್ ಲೋಬೊ ಧಾರ್ಮಿಕ ವಿಧಿ ವಿಧಾನ ನೆರವೇರಿಸಿ ದಿವ್ಯ ಬಲಿ ಪೂಜೆ ಅರ್ಪಿಸಿದರು.
ಕಾಪುಚಿನ್ ಧರ್ಮ ಗುರು ಫಾ. ನವೀನ್ ಡಿಸೋಜಾ ಪ್ರವಚನ ನೀಡಿದರು. ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ. ವಿಜಯ್ ಲೋಬೊ, ದಯಾಳ್ ಭಾಗ್ ಆಶ್ರಮದ ಸುಪೀರಿಯರ್ ಫಾ. ಪೆಡ್ರಿಕ್ ಬ್ರಾಗ್ಸ್, ವಿಮುಕ್ತಿ ನಿರ್ದೇಶಕ ಫಾ. ವಿನೋದ್ ಮಾಸ್ಕರೆನ್ಹಸ್ ಮೊದಲದವರು ಉಪಸ್ಥಿತರಿದ್ದರು.