ವಿಮುಕ್ತಿ ಸ್ವ-ಸಹಾಯ ಸಂಘಗಳ ಒಕ್ಕೂಟ ಸಾಮಾನ್ಯ ಸಭೆ

0

ಬೆಳ್ತಂಗಡಿ : ವಿಮುಕ್ತಿ ಸ್ವ-ಸಹಾಯ ಸಂಘಗಳ ಒಕ್ಕೂಟ ಸಾಮಾನ್ಯ ಸಭೆಯು ಎ. 27ರಂದು ವಿಮುಕ್ತಿ ಸಭಾಭವನದಲ್ಲಿ ನಡೆಯಿತು.

ವಿಮುಕ್ತಿ ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶಾಲಿ ಇವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ನಿರ್ದೇಶಕ ಫಾ ರೋಹನ್ ಲೋಬೋರವರು ಉಪಸ್ಥಿತರಿದ್ದರು. ಅನ್ನಮ್ಮರವರು ಸರ್ವರನ್ನು ಸ್ವಾಗತಿಸಿ, ಹಿಂದಿನ ಒಕ್ಕೂಟ ಸಾಮಾನ್ಯ ಸಭೆಯ ವರದಿಯನ್ನು ವಾಚಿಸಿದರು. ಸಂಸ್ಥೆಯ ಸಿಬ್ಬಂಧಿಗಳು ಘಟಕ ಸಭೆಯ ವಿವರಗಳು, ಒಕ್ಕೂಟ ಸಾಲಗಳು, ಲೆಕ್ಕಪರಿಶೋಧನೆ, ವಿದಾಸ್ನೇಹಿ ಯೋಜನೆ, ಲಾಭಾಂಶ ವಿತರಣೆಯ ವಿವರಗಳನ್ನು ನೀಡಿದರು. ನವೆಂಬರ್‌ನಲ್ಲಿ ನಡೆದಿರುವ ಒಕ್ಕೂಟದ ಬೆಳ್ಳಿ ಹಬ್ಬ ಆಚರಣೆಯ ಬಗ್ಗೆ ಚರ್ಚಿಸಲಾಯಿತು.

ಫಾ. ರೋಹನ್ ಲೋಬೊ ಮಾತನಾಡುತ್ತಾ 2025-26ರಲ್ಲಿ ಹಮ್ಮಿಕೊಳ್ಳಲಾಗುವ ಎಲ್ಲಾ ಕಾರ್ಯಕ್ರಮಗಳ ವಿವರ ನೀಡಿ ಎಲ್ಲಾ ಸದಸ್ಯರ ಸಹಕಾರ ಬಯಸಿದರು. ಒಕ್ಕೂಟದ ಅಧ್ಯಕ್ಷೆ ಶಾಲಿ ಮಾತನಾಡಿ ಎಲ್ಲಾ ಗುಂಪುಗಳನ್ನು ಚೆನ್ನಾಗಿ ನಡೆಸಿಕೊಂಡು ಹೋಗಿ ಹಾಗೂ ಸಣ್ಣ ಪುಟ್ಟ ಸಮಸ್ಯೆಗಳನ್ನು ತಮ್ಮಲ್ಲೇ ಪರಿಹರಿಸಿಕೊಳ್ಳಲು ಸದಸ್ಯರಿಗೆ ಸಲಹೆಯನ್ನಿತ್ತರು.

ಹಾಗೆಯೇ ಆರೋಗ್ಯ ವಿಮೆಯ ಯೋಜನೆಯನ್ನು ಮುಂದುವರೆಸಲು ಸಹ ನಿರ್ದೇಶಕರಲ್ಲಿ ಮನವಿಯನ್ನಿತ್ತರು. ಕಾರ್ಯಕ್ರಮದಲ್ಲಿ 60 ಸದಸ್ಯರು ಭಾಗವಹಿಸಿದ್ದರು. ಅನ್ನಮ್ಮರವರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here