ಎಂ.ಎಸ್. ಡಬ್ಲ್ಯೂ ವಿದ್ಯಾರ್ಥಿಗಳ ಸ್ವಚ್ಛತಾ ಜಾಥ: ಗ್ರಾಮಸ್ಥರು ಹಾಗೂ ಗ್ರಾಮದ ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮ

0

ಅಂಡಿಂಜೆ: ಎ. 22ರಂದು ಗ್ರಾಮಸ್ಥರು ಹಾಗೂ ಗ್ರಾಮದ ಪ್ರತಿನಿಧಿಗಳೊಂದಿಗೆ, ಡಾ. ಪಿ. ದಯಾನಂದ ಪೈ, ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇಲ್ಲಿನ ಎಂ.ಎಸ್. ಡಬ್ಲ್ಯೂ ವಿದ್ಯಾರ್ಥಿಗಳ ಸ್ವಚ್ಛತಾ ಜಾಥ ಮತ್ತು ಗ್ರಾಮಸ್ಥರು ಹಾಗೂ ಗ್ರಾಮದ ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಮೊದಲಿಗೆ ವಿದ್ಯಾರ್ಥಿಗಳು ಸರಕಾರಿ ಪದವಿ ಪೂರ್ವ ಕಾಲೇಜು ಕೊಕ್ರಡಿಯಿಂದ ಗ್ರಾಮ ಪಂಚಾಯತ್ ಅಂಡಿಂಜೆವರೆಗೆ ಸ್ವಚ್ಛತೆ ಜಾಥ ಕಾರ್ಯಕ್ರಮ ನಡೆಸಿದರು.

ಇಲ್ಲಿ ಸ್ವಚ್ಛತೆ ಮತ್ತು ಪರಿಸರ ರಕ್ಷಣೆ ಬಗ್ಗೆ ಮನೆ ಮನೆಗೆ ಅರಿವು ಮೂಡಿಸುವುದರ ಜೊತೆಗೆ, ರಸ್ತೆ ಬದಿ ಸ್ವಚ್ಛತೆ ಕಾರ್ಯಕ್ರಮವನ್ನು ಮಾಡಿದರು. ಗ್ರಾಮ ಪಂಚಾಯಿತಿ ಅಂಡಿಂಜೆ ತಲುಪಿ ನಂತರ ಗ್ರಾಮಸ್ಥರು, ಗ್ರಾಮದ ಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿ, ಗ್ರಾಮದ ವಿವಿಧ ಸಮಸ್ಯೆಗಳು ಹಾಗೂ ಗ್ರಾಮಸ್ಥರಿಗೆ ನೀಡಲಾಗುವ ಸೌಲಭ್ಯಗಳು ಹಾಗೂ ಸವಾಲುಗಳು ಫಲಾನುಭವಿಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನಗಳನ್ನು ಕುರಿತು ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಮೂಲಕ ಮಾಹಿತಿ ಪಡೆದರು.

ಗ್ರಾಮ ಪಂಚಾಯತ್ ಅಧ್ಯಕ್ಷ ನಿತಿನ್, ಸದ್ಯಸ್ಯರು ಮೋಹನ್ ಅಂಡಿಂಜೆ, ಗ್ರಾಮದ ಲೆಕ್ಕಾಧಿಕಾರಿ ವಿಜಿಟ್ ಅಮಿನ್ ಇವರು ಸೂಕ್ತ ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸಿದರು. ಪಂ. ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ, ಸದಸ್ಯರಾದ ಜಯಂತಿ ಲೋಕಯ್ಯ ಪೂಜಾರಿ, ಜಗದೀಶ್ ಹೆಗ್ಡೆ, ಕಾರ್ಯದರ್ಶಿ ಚಂಪಾ, ಗ್ರಾಮ ಪಂಚಾಯತ್ ಸಿಬ್ಬಂದಿ ಮಮತಾ, ಎಂ. ಎಸ್. ಡಬ್ಲ್ಯೂ ಸಂಯೋಜಕಿ ಅರುಣ ಕುಮಾರಿ, ಉಪನ್ಯಾಸಕಿ ಶ್ರೀಕಲ ಕುಮಾರಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಕಾರ್ತಿಕ್ ಹಾಗೂ ಸ್ಪರ್ಶ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಭರತ್ ರವರು ನಿರ್ವಹಿಸಿದರು. ವಿಸ್ಮಯ ಸ್ವಾಗತಿಸಿದರು. ಹಾಗೂ ಸಂಜಯ್ ಕೆ.ಎಸ್. ಅತಿಥಿಗಳಿಗೆ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here