
ಹತ್ಯಡ್ಕ: ಸಂಘದ ಮಹಿಳೆಯರಿಗೆ ಸೀರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನವೋದಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಬರ್ಗುಳ ರವರು ಸಮವಸ್ತ್ರವನ್ನು ಎ.25ರಂದು ವಿತರಿಸಿದರು.

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ರಾವ್, ಸಂಘದ ಉಪಾಧ್ಯಕ್ಷ ರಾಜು ಸಾಲಿಯಾನ್, ಸದಸ್ಯರಾದ ಧರ್ಮರಾಜ್ ಗೌಡ ಅಡ್ಕಾಡಿ, ಕೊರಗಪ್ಪ ಗೌಡ ಶಿಶಿಲ, ಬೇಬಿ ಕಿರಣ್, ವರದಶಂಕರ್ ದಾಮ್ಲೆ, ಕೃಷ್ಣಪ್ಪ ಗೌಡ, ನಾಗೇಶ್ ಜಿ., ಗಂಗಾವತಿ, ಬೇಬಿ, ನವೋದಯ ಸಂಘದ ಜಿಲ್ಲಾ ಮೇಲ್ವಿಚಾರಕ ರಂಜಿತ್ ಕುಮಾರ್, ತಾಲೂಕು ಮೇಲ್ವಿಚಾರಕ ಸ್ಟಾನಿ ಪಿಂಟೋ ಉಪಸ್ಥಿತರಿದ್ದರು. ಹತ್ಯಡ್ಕ ನವೋದಯ ಸ್ವಸಹಾಯ ಸಂಘದ ಪ್ರೇರಕರಾದ ಅಭಿಜಿತ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ರಾವ್ ಅತಿಥಿಗಳನ್ನು ಸ್ವಾಗತಿಸಿ, ಧನ್ಯವಾದವಿತ್ತರು.