
ಬಂದಾರು: ಬೆಳ್ತಂಗಡಿ ತಾಲೂಕಿನ ಹಲವೆಡೆ ನೆಕ್ ವರ್ಕ್ ಸಮಸ್ಯೆ ಕಂಡು ಬರುತ್ತಿದ್ದು ಇದೀಗ ಪಾಣೆಕಲ್ಲು ಹಾಗೂ ಮೈರೋಲ್ತಡ್ಕ ಗ್ರಾಮಗಳಲ್ಲಿ ಏರ್ಟೆಲ್ ಟವರ್ ಇದ್ದು ಗ್ರಾಹಕರು ನೆಟ್‌ವರ್ಕ್ ಸಿಗದ ಕಾರಣ ಆನ್‌ಲೈನ್ ಕೆಲಸಗಳನ್ನು ಮಾಡಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗೂ ನೂತನವಾಗಿ ನಿರ್ಮಾಣಗೊಂಡ ಬೈಪಾಡಿ ಬಿಇಎಸ್‌ಎನ್‌ಎಲ್ ಟವರ್ ನಲ್ಲೂ ನೆಟ್‌ವರ್ಕ್ ಸಿಗುತ್ತಿಲ್ಲ, ಇದರಿಂದಾಗಿ ಮನೆಯಲ್ಲಿ ಕೂತು ಕಚೇರಿ ಕೆಲಸ ಮಾಡುವ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ನೆಟ್‌ವರ್ಕ್ ಸಮಸ್ಯೆ ಖಂಡಿಸಿ ಉಗ್ರ ಪ್ರತಿಭಟನೆ ಮಾಡಲು ಗ್ರಾಹಕರು ಮುಂದಾಗಿದ್ದಾರೆ.