
ಬೆಳ್ತಂಗಡಿ: ಪಹಾಲ್ಗಮ್ ನ ಬೈಸರನ್ ಹುಲ್ಲುಗಾವಲು ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ನಡೆಸಿದ ಕ್ರೂರ ಕೃತ್ಯಕ್ಕೆ ಬೆಳ್ತಂಗಡಿ ಸಿ. ಎ ಬ್ಯಾಂಕ್ ವತಿಯಿಂದ ಸಂತಾಪ ಸಭೆ ಎ. 25ರಂದು ಬ್ಯಾಂಕ್ ಆವರಣದಲ್ಲಿ ನಡೆಸಿದರು. ಸಿ. ಎ ಬ್ಯಾಂಕ್ ಅಧ್ಯಕ್ಷ ಅಜಿತ್ ಕುಮಾರ್ ಅರಿಗ, ಉಪಾಧ್ಯಕ್ಷ ಗಣೇಶ್ ಭಂಡಾರಿ, ನಿರ್ದೇಶಕರದ ಮುನಿರಾಜ ಅಜ್ರಿ, ಪುರಂದರ, ಶ್ರೀನಾಥ್ ಕೆ. ಎಂ., ಅಶೋಕ್ ರೈ, ನಾರಾಯಣ ಆಚಾರ್ಯ, ಹರಿಯಪ್ಪ ನಾಯ್ಕ, ತಿಮ್ಮಪ್ಪ ನಾಯ್ಕ, ರಮೇಶ, ರಾಧಾ, ಪ್ರೇಮ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸಾದ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.