ಹೊಸಂಗಡಿ: ದೇರಾರ್ ಶಾರದಾ ಪೂಜಾರಿ ಎಂಬವರ ಮನೆಗೆ ಎ. 22ರಂದು ಬೀಕರ ಗಾಳಿ ಮಳೆಗೆ ಮನೆಯ ಮೇಲೆ ತೆಂಗಿನ ಮರ ಬಿದ್ದು ಭಾಗಶ ಹನಿಗೊಳಾಗಿದ್ದು ಅಪಾರ ನಷ್ಟವಾಗಿರುತ್ತದೆ. ಇನ್ನೊಂದು ತೆoಗಿನ ಮರ ಬಿದ್ದು ಬಚ್ಚಲು ಕೊಟ್ಟಿಗೆ ಸಂಪೂರ್ಣ ನಾಶವಾಗಿತ್ತದೆ. ಆ ಕೂಡಲೇ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸದಸ್ಯರು ಭೇಟಿ ನೀಡಿ ಒಬ್ಬಂಟಿಯಾಗಿರುವ ಆ ತಾಯಿಗೆ ಧೈರ್ಯ ತುಂಬಿದರು.
ಪ್ರಶಾಂತ್ ಎಂಬವರ ಮನೆಯ 20 ಶೀಟ್ ಹಾನಿಯಾಗಿದೆ. ಕೇಶವ ಎಂಬವರ ಮನೆಯ ಮೇಲೆ ಅಡಿಕೆ ಮರ ಬಿದ್ದು ಹಾನಿಯಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಕಾರ್ಯದರ್ಶಿ ಸ್ಥಳಕ್ಕೆ ಭೇಟಿ ನೀಡಿ ಪಂಚಾಯತ್ ನಿಂದ ನೆರವು ನೀಡುವ ಭರವಸೆ ನೀಡಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧರಣೇಂದ್ರ ಕುಮಾರ್ ಹಾಗು ಕ್ಲಬ್ ಸದಸ್ಯರುಗಳಾದ ಚಂದ್ರಶೇಖರ ಚಂದ್ರಕಾಂತ್, ಕೇಶವ, ದಿನೇಶ್, ಭರತ್, ಸುದರ್ಶನ್ ಪಿಲಂಬು ಹಾಜರಿದ್ದರು.