
ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಶಾಖೆಯ ಸಾಲಗಾರ ಶಶಿದರ ದೇವಾಡಿಗ ಮತ್ತು ದಿನೇಶ್ ಆಚಾರ್ಯ ಇವರು ಅಕಾಲಿಕ ಮರಣ ಹೊಂದಿದ್ದು ಸದ್ರಿಯವರಿಗೆ ನೀಡಲಾಗಿದ್ದ ಸಾಲವನ್ನು ಸಂಘದ ಆಡಳಿತ ಮಂಡಳಿಯ ಅನುಮತಿಯ ಮೇರೆಗೆ ಶ್ರೀ ಗುರು ಸಾಲಗಾರರ ಮರಣಾ ನಿಧಿಯಿಂದ ಸಂಪೂರ್ಣವಾಗಿ ಮುಕ್ತಾಯಗೊಳಿಸಿ ಕಷ್ಟಕ್ಕೆ ಸ್ಪಂದಿಸಲಾಯಿತು. ಸಾಲದಿಂದ ಋಣಮುಕ್ತಗೊಳಿಸಿದ ಬಗ್ಗೆ ಖಾತ್ರಿ ಪತ್ರವನ್ನು ನಮ್ಮ ಸಂಘದ ಉಪಾಧ್ಯಕ್ಷ ಭಗೀರಥ ಜಿ. ಇವರು ವಿತರಿಸಿದರು. ಸಂಸ್ಥೆಯ ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್,
ಶಾಖಾ ವ್ಯವಸ್ಥಾಪಕಿ ಸೌಮ್ಯ ಹಾಗು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಬೆಳ್ತಂಗಡಿ ಶಾಖೆಯಿಂದ 2024-25ನೇ ಸಾಲಿನಲ್ಲಿ ಒಟ್ಟು 5 ಕುಟುಂಬಗಳಿಗೆ ರೂ.877739/- ಹಾಗು ಈ ಯೋಜನೆಯಿಂದ ಒಟ್ಟು 82 ಫಲಾನುಭವಿಗಳಿಗೆ 61,21,372/- ರೂ ಮರಣ ನಿಧಿಯನ್ನು ನೀಡಿ ಅವಲಂಬಿತ ಕುಟುಂಬಗಳು ಋಣ ಮುಕ್ತಗೊಂಡಿದೆ.