
ಮಡಂತ್ಯಾರು: ಭದ್ರಾ ಎಲೆಕ್ಟ್ರಾನಿಕ್ಸ್ ಮುಂಭಾಗ ಪೆಟ್ ಪ್ಯಾಲೇಸ್ ಎ. 23ರಂದು ಶುಭಾರಂಭಗೊಂಡಿತು. ಉದ್ಯಮಿ ಜೆರಾಲ್ಡ್ ಕೊರೆಯ ಸಂಸ್ಥೆಯನ್ನು ಉದ್ಘಾಟಿಸಿದರು. ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್ ದೀಪ ಬೆಳಗಿಸಿದರು. ಮಾಲಕರ ತಂದೆ ಮಾದವ, ತಾಯಿ ಯಶೋಧ, ಪುಷ್ಪರಾಜ್ ಜೈನ್ ಮಾಲಕ ಲಿಖಿತ್ ಸರ್ವರ ಸಹಕಾರ ಕೋರಿ ಇಲ್ಲಿ ಎಲ್ಲಾ ಸಾಕು ಪ್ರಾಣಿಯ ಆಹಾರ ಲಭ್ಯವಿದೆ ಎಂದು ತಿಳಿಸಿದರು. ವಿನ್ಸೆಂಟ್ ಮೊರಾಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.