ಮುಂಡೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ

0

ಬಂದಾರು: ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಮುಂಡೂರು ಇಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಎ. 21ರಂದು ಸಂಜೆ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪ್ರಸಾದ ಶುದ್ದಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಹೋಮ ಇತ್ಯಾದಿ ಹಾಗೂ ಎ. 22ರಂದು ಬೆಳಿಗ್ಗೆ 6ರಿಂದ ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನೆ, ಗಣಹೋಮ, ಶ್ರೀ ದುರ್ಗಾಪರಮೇಶ್ವರಿ, ಗಣಪತಿ ಚಾಮುಂಡೇಶ್ವರಿ, ಪರಿವಾರ ದೈವಗಳಿಗೆ,ಕಲಶಾರಾಧನೆ, ನಾಗ ತಂಬಿಲ, ಕಲಶಾಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ, ಮಹಾ ಪೂಜೆ, ಪ್ರಸಾದ ವಿತರಣೆ, ಸಂಜೆ 6ಗಂಟೆಗೆ ರಂಗಪೂಜೆ, ರಾತ್ರಿ 8.30ಕ್ಕೆ ಅನ್ನ ಸoತರ್ಪಣೆ, 6.30ರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದಲ್ಲಿ ಹರಿದರ್ಶನ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಮತ್ತು ಸುಬ್ಬಣ್ಣ ಗೌಡ ಮತ್ತು ಮನೆಯವರು ಹಾಗೂ ಶ್ರೀ ಕ್ಷೇತ್ರದ ಧರ್ಮದರ್ಶಿ ಎಂ. ಆನಂದ ಗೌಡ ಹಾಗೂ ಭಕ್ತವೃಂದದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here