

ಇಂದಬೆಟ್ಟು: ಗ್ರಾಮದ ಹೆಸರಾಂತ ಯುವ ಸಂಘಟನೆ ನವ ಭಾರತ್ ಗೆಳೆಯರ ಬಳಗ ‘ರಿ’ ಕಲ್ಲಾಜೆ ಇಂದಬೆಟ್ಟು ಇದರ ವಾರ್ಷಿಕ ಮಹಾಸಭೆಯು ಎ. 20ರಂದು ಕಲ್ಲಾಜೆ ಶಾಲಾ ವಠಾರದಲ್ಲಿ ಯತೀಶ್ ನೆರೋಲ್ದಪಲ್ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಹಾಸಭೆಯ ನಡವಳಿ, ವಾರ್ಷಿಕ ವರದಿ, ಲೆಕ್ಕ ಪತ್ರ ಪರಿಶೋಧನಾ ವರದಿಯನ್ನು ಕಾರ್ಯದರ್ಶಿ ಅವಿನಾಶ್ ಕಲ್ಲಾಜೆ ಸಭೆಗೆ ಮಂಡಿಸಿದರು ಸದಸ್ಯರ ಸರ್ವಾನುಮತದಿಂದ ಅಂಗೀಕಾರ ಪಡೆಯಲಾಯಿತು.
2025-2026 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಕೆಳಗಿನ ಕಲ್ಲಾಜೆ, ನೂತನ ಅಧ್ಯಕ್ಷ ರಮೇಶ್ ನೂಜಿಲೆ, ಕಾರ್ಯದರ್ಶಿ ಜಗದೀಶ್ ನೆರೋಲ್ದ ಪಲ್ಕೆ, ಕೋಶಾಧಿಕಾರಿ ಪ್ರತೀಕ್ಷ್ ಹಾನಿಬೆಟ್ಟು, ಉಪಾಧ್ಯಕ್ಷರಾಗಿ ಜಯ ನೂಜಿಲೆ, ಜೊತೆ ಕಾರ್ಯದರ್ಶಿಯಾಗಿ ನಾಗೇಶ್ ಮುಂಡ್ರಬೆಟ್ಟು, ಧಾರ್ಮಿಕ ವಿಭಾಗದ ನಿರ್ದೇಶಕರಾಗಿ ರಾಜೇಶ್ ಹೆಬ್ಬಾರಪಲ್ಕೆ, ಶ್ರೀಕಾಂತ್ ಸೋಮಯ್ಯದಡ್ಡು, ಆರೋಗ್ಯ ವಿಭಾಗದ ನಿರ್ದೇಶಕರಾಗಿ ಪ್ರಜ್ವಲ್ ಇಂದಬೆಟ್ಟು, ಕ್ರೀಡಾ ವಿಭಾಗದ ನಿರ್ದೇಶಕರಾಗಿ ಅವಿನಾಶ್ ಸೋಮಯ್ಯದಡ್ಡು, ಶೈಕ್ಷಣಿಕ ವಿಭಾಗದ ನಿರ್ದೇಶಕರಾಗಿ ನವೀನ್ ನೇತ್ರಾವತಿ ನಗರ, ಮಾಧ್ಯಮ ಮತ್ತು ಪ್ರಚಾರ ವಿಭಾಗದ ನಿರ್ದೇಶಕರಾಗಿ ಸಂದೀಪ್ ಅಲಕ್ಕೆ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅವಿನಾಶ್ ಕಲ್ಲಾಜೆ ಸ್ವಾಗತಿಸಿದರು. ಜಗದೀಶ್ ನೆರೋಲ್ದಪಲ್ಕೆ ಧನ್ಯವಾದವಿತ್ತರು.