

ಹತ್ಯಡ್ಕ: ಅರಿಕೆಗುಡ್ಡೆ ವನದುರ್ಗಾ ದೇವಿ ಸನ್ನಿದಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ವನದುರ್ಗಾ ಸಭಾಭವನ ಲೋಕಾರ್ಪಣೆ ಮುಂಚಿತವಾಗಿ ಎ. 18ರಂದು ಸಾಯಂಕಾಲ ಶ್ರೀ ಹೊಳಲಿ ವೇದಮೂರ್ತಿ ಸುಬ್ರಮಣ್ಯ ತಂತ್ರಿಗಳ ಆಗಮಿಸಿ ರಾತ್ರಿ ವಾಸ್ತು ರಕ್ಷಾ ಹೋಮ-ವಾಸ್ತು ಪೂಜೆ ನಡೆದು ಎ. 19ರಂದು ಬೆಳಗ್ಗೆ ಗಣಹೋಮ ನಂತರ ಹಾಲು ಉಕ್ಕಿಸುವ ಕಾರ್ಯಕ್ರಮ ನಡೆಯಿತು.
ಸಂಪುಟ ನರಸಿಂಹ ಮಠ ಸುಬ್ರಮಣ್ಯದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಖ್ಯಾತ ಜ್ಯೋತಿಷಿ ಮದ್ವರಾಯ ಭಟ್, ಖ್ಯಾತ ಪುರೋಹಿತರಾದ ಪ್ರಹ್ಲಾದ್ ತಾಮನ್ಕರ್,ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ, ಬಿ ಜೆ ಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ಪುಟಾಣಿ, ಅರಸಿನಮಕ್ಕಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ. ಎಸ್., ಅರಿಕೆ ಗುಡ್ಡೆ ವನದುರ್ಗ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಂಗ ದಾಮ್ಲೆ, ಅರ್ಚಕ ಉಲ್ಲಾಸ್ ಭಟ್, ಅರಸಿನಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ದೇವಳದ ಸರ್ವ ಸದಸ್ಯರು ಮತ್ತು ಊರ ಪರವೂರ ಭಕ್ತರ ಸಮ್ಮುಖದಲ್ಲಿ ಲೋಕಾರ್ಪಣೆ ಗೊಂಡಿತು.

ಸಭಾ ಕಾರ್ಯಕ್ರಮದಲ್ಲಿ ಸಭಾಂಗಣಕ್ಕೆ ಅವಿರತವಾಗಿ ಶ್ರಮಿಸಿದ ಸಂಜೀವ ಶೆಟ್ಟಿಗಾರ್ ತಮ್ಮಯ್ಯ ಶೆಟ್ಟಿಗಾರ್, ಆನಂದ ಶೆಟ್ಟಿಗಾರ್, ವಸಂತ ಶೆಟ್ಟಿಗಾರ್, ರೋಹಿತಾಶ್ವ ಶೆಟ್ಟಿಗಾರ್, ನಾರಾಯಣ ಆಚಾರ್ಯ, ರಾಮಕೃಷ್ಣ ಶೆಟ್ಟಿಗಾರ್, ಹರಿಶ್ಚಂದ್ರ ಶೆಟ್ಟಿಗಾರ್, ಆನಂದ ಅಡಪ ರವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಮುಂಚಿತವಾಗಿ ಸುಂದರ ಬಿಳಿನೆಲೆ ಇವರಿಂದ ಭಜನಾ ಕಾರ್ಯಕ್ರಮ ನೆರವೇರಿತು.
ನೀತಾ, ರೇಷ್ಮಾ, ಪ್ರಮೀಳಾ, ಧನವತಿ ಪ್ರಾರ್ಥಿಸಿ
ದೇವಳದ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ ಸ್ವಾಗತಿಸಿದರು. ವೃಶಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.