

ಕನ್ಯಾಡಿ: ಏ.19ರಂದು ಸೇವಾನಿಕೇತನಕ್ಕೆ ರಾಜೇಂದ್ರ ಅಜ್ರಿ ಭೇಟಿ ನೀಡಿ ತನ್ನ ಹುಟ್ಟುಹಬ್ಬದ ಜೊತೆಗೆ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ ಸೇವಾಧಾಮ ಮಾಡುವ ಕಾರ್ಯಚಟುವಟಿಕೆಗಳಿಗೆ ರೂ.15,000 ಮೊತ್ತವನ್ನು ನೀಡಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಸೇವಾಭಾರತಿ ಸಂಸ್ಥೆಯ ಫಂಡ್ ರೈಸಿಂಗ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಆಶ್ರಿತ್ ಸಿ.ಪಿ ಇದನ್ನು ಸ್ವೀಕರಿಸಿ ಸಂಸ್ಥೆಯ ಪರವಾಗಿ ಶುಭಹಾರೈಸಿ, ಧನ್ಯವಾದವಿತ್ತರು.