

ಚಾರ್ಮಾಡಿ: ಗ್ರಾಮ ಅಣಿಯೂರು ಗುತ್ತುಮನೆ ನಿವಾಸಿ ವಾಸುದೇವ ಗೌಡ (65ವ) ಏ. 16ರಂದು ನಿಧನರಾಗಿದ್ದಾರೆ. ಮೃತರು ಪ್ರಗತಿಪರ ಕೃಷಿಕ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಚಾರ್ಮಾಡಿ ಗ್ರಾಮ ಸಮಿತಿಯ ಗೌರವಾಧ್ಯಕ್ಷ, ಚಾರ್ಮಾಡಿ ಗ್ರಾ. ಪಂ. ಮಾಜಿ ಸದಸ್ಯ, ಚಾರ್ಮಾಡಿ ಮಾರಿಗುಡಿ ದೇವಸ್ಥಾನದ ಅಧ್ಯಕ್ಷ, ಗುತ್ತು ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಮೃತರು ಪತ್ನಿ ಗೀತಾ, ಮಕ್ಕಳಾದ ಚರಣ್, ವರುಣ್, ಸ್ವಾತಿ, ಚಿತ್ರರವರನ್ನು ಅಗಲಿದ್ದಾರೆ.