

ಬೆಳ್ತಂಗಡಿ: ಗುರುವಾಯನಕೆರೆಯ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಏ. 20ರಂದು ನಡೆಯಲಿರುವ ಬಂಟರ ತಾಲೂಕು ಮಟ್ಟದ ಕ್ರೀಡಾ ಕೂಟದ ಕ್ರಿಕೆಟ್ ಪಂದ್ಯಾಟದ ಆಮಂತ್ರಣ ಬಿಡುಗಡೆ ಮಾಡಲಾಯಿತು.
ಗುರುವಾಯನಕೆರೆಯಲ್ಲಿರುವ ಬಂಟರ ಭವನದಲ್ಲಿ ಏ. 14ರಂದು ನಡೆದ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ, ಗೌರವ ಸಲಹೆಗಾರ ವಿಶೇಷ ಆಹ್ವಾನಿತರ ಸಭೆಯಲ್ಲಿ ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು.
ಜಯರಾಮ್ ಶೆಟ್ಟಿ ಮೂಡಾಯೂರು, ವಿಜಯ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಜಯಂತ್ ಶೆಟ್ಟಿ ಕುಂಠಿಣಿ, ಬಂಟರ ಸಂಘ ಬೆಳ್ತಂಗಡಿ ಕಾರ್ಯದರ್ಶಿ ಸುರೇಶ್ ಕುಮಾರ್ ಲಾಯಿಲ, ಉಪಾಧ್ಯಕ್ಷ ನವೀನ್ ಸಾಮಾನಿ, ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರದ್ಧಾ, ಜ.ಕಾರ್ಯದರ್ಶಿ ಕಿರಣ್ ಶೆಟ್ಟಿ, ಮಾತೃ ಸಂಘದ ಪ್ರತಿನಿಧಿ ಜಯರಾಮ್ ಶೆಟ್ಟಿ, ರಘುರಾಮ್ ಶೆಟ್ಟಿ ಸಾಧನ, ಯುವ ವಿಭಾಗ ಸಂಚಾಲಕ ಪುಷ್ಪ ರಾಜ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಜಯಲಕ್ಷ್ಮಿ ಸಾಮಾನಿ, ಕ್ರೀಡಾಕೂಟ ಸಂಚಾಲಕ ವೆಂಕಟರಮಣ ಶೆಟ್ಟಿ ಉಪಸ್ಥಿತರಿದ್ದರು.