

ನೆಲ್ಯಾಡಿ: ಪ್ರಮುಖ ಧಾರ್ಮಿಕ ಶ್ರದ್ದಾ ಕೇಂದ್ರ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಬಹು ದಿನಗಳ ಕನಸಾದ ಸುಸಜ್ಜಿತ ಸಿಮಿತೇರಿ ಚಾಪಲ್ ನ ನಿರ್ಮಾಣ ಪೂರ್ಣಗೊಂಡಿದೆ.
ನವೀಕೃತ ಚಾಪಲ್ ಅನ್ನು ವಿವಿದ ಧಾರ್ಮಿಕ ಪೂಜಾ ವಿಧಿಗಳೊಂದಿಗೆ ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಚರ್ಚ್ ನ ಉಪಯೋಗಕ್ಕಾಗಿ ಲೋಕಾರ್ಪಣೆ ಗೈದರು.
ಅಗಲಿದ ಪೂರ್ವಜ ಸ್ಮರಣೆ ನಮ್ಮ ಸಂಸ್ಕೃತಿಯ ಒಂದು ಬಹು ಮುಖ್ಯ ಅಂಶವಾಗಿದೆ ಎಂದು ಲಾರೆನ್ಸ್ ಮುಕ್ಕುಯಿ ತಿಳಿಸಿದರು.
ನಿರ್ಮಾಣ ಕಾಮಗಾರಿಗಳ ಮೇಲ್ವಿಚಾರಕರಾಗಿ ದುಡಿದ ಟ್ರಷ್ಟಿ ಗಳಾದ ಜೋಬಿನ್, ಅಲ್ಬಿನ್, ಅಲೆಕ್ಸಾòಡೆರ್, ಶಿಬು ಇವರನ್ನು ಚರ್ಚ್ ವತಿಯಿಂದ ಸನ್ಮಾನಿಸಲಾಯಿತು.
ಜೇಮ್ಸ್ ಉಪ್ಪಿನಂಗಡಿ ಮುಖ್ಯ ಗುತ್ತಿಗೆಧಾರರಾಗಿ ಕೆಲಸ ನಿರ್ವಹಿಸಿದರು. ನಿರ್ಮಾಣಕ್ಕೆ ಸಹಕರಿಸಿದ ಎಲ್ಲರನ್ನು ಧರ್ಮ ಗುರು ಫಾ ಶಾಜಿ ಮಾತ್ಯು ವಂದನಾರ್ಪಣೆ ಗೈದರು.