

ಬೆಳ್ತಂಗಡಿ: ಧರ್ಮ ಪ್ರಾಂತ್ಯದಲ್ಲಿ ಗರಿಗಳ ಹಬ್ಬ ಆಚರಿಸಲಾಯಿತು. ಪ್ರಭು ಕ್ರಿಸ್ತನ ಜೆರುಸೆಲಂ ಪ್ರವೇಶನದ ನೆನಪಿನಲ್ಲಿ ಆಚರಿಸುವ ಈ ಹಬ್ಬವು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷ ಬಿಷಪ್ ಲಾರೆನ್ಸ್ ನವರ ಕಾರ್ಮಿಕತ್ವದಲ್ಲಿ ಸಂತ ಲಾರೆನ್ ಸರ ಪ್ರಧಾನ ದೇವಾಲಯದಲ್ಲಿ ಆಚರಿಸಲಾಯಿತು.
ಈ ಹಬ್ಬವು ಪ್ರಭು ಕ್ರಿಸ್ತರ ಶಿಲುಬೆಯ ಮರಣದ ಹಾಗೂ ಪುನರುದ್ದಾನದ ಸ್ಮರಣೆಯನ್ನು ಆಚರಿಸುವ ಪವಿತ್ರ ವಾರದ ಮೊದಲನೆಯ ದಿನ. ಇದು ಕ್ರೈಸ್ತರಿಗೆ ಸಂಬಂಧಿಸಿದಂತೆ ಉಪವಾಸದ ಹಾಗೂ ಪ್ರಾರ್ಥನೆಯ ದಿನಗಳು. ಸಹೋದರರಿಗಾಗಿ ಪ್ರಾಣ ತ್ಯಾಗ ಮಾಡಿದ ಪ್ರಭು ಕ್ರಿಸ್ತರು ನಮಗೆ ಪ್ರೇರಣೆಯಾಗಲಿ ಎಂದು ಲಾರೆನ್ಸ್ ನವರು ಹಾರೈಸಿದರು.
ಈ ಗರಿಗಳ ಹಬ್ಬವು ಧರ್ಮ ಪ್ರಾಂತ್ಯದ ಎಲ್ಲಾ ದೇವಾಲಯಗಳಲ್ಲಿ ಇಂದು ಆಚರಿಸಲಾಯಿತು. ಸಂತ ಲಾರೆನ್ ಸರ ದಾನ ದೇವಾಲಯದ ಧರ್ಮ ಗುರು ಥಾಮಸ್, ಫಾಧರ್ ಕುರಿಯಾಕೋಸ್, ಫಾದರ್ ಟೊಮಿ, ಧರ್ಮ ಭಗಿನಿಯರು ಹಾಗು ಬಹು ಸಂಖ್ಯೆಯಲ್ಲಿ ವಿಶ್ವಾಸಿಗಳು ಭಾಗವಹಿಸಿದರು.