

ಉಜಿರೆ: ಪ್ರಭು ಕ್ರಿಸ್ತನ ಜೆರುಸೆಲಂ ಪ್ರವೇಶದ ನೆನಪಿನಲ್ಲಿ ಆಚರಿಸುವ ಈ ಹಬ್ಬವು ಬೆಳ್ತಂಗಡಿ ತಾಲೂಕಿನದ್ಯಂತ ಆಚರಿಸಲಾಯಿತು.
ಈ ಹಬ್ಬವು ಪ್ರಭು ಕ್ರಿಸ್ತರ ಶಿಲುಬೆಯ ಮರಣದ ಹಾಗೂ ಪುನರುದ್ದಾನದ ಸ್ಮರಣೆಯನ್ನು ಆಚರಿಸುವ ಪವಿತ್ರ ವಾರದ ಮೊದಲನೆಯ ದಿನ. ಕ್ರೈಸ್ತರಿಗೆ ಸಂಬಂಧಿಸಿದಂತೆ ಉಪವಾಸದ ಹಾಗೂ ಪ್ರಾರ್ಥನೆಯ ದಿನಗಳು ಪ್ರಾರಂಭ ಗೊಳ್ಳುತ್ತದೆ.
ಧರ್ಮ ಗುರು ಅಶೋಕ್ ಡಿಸೋಜಾ ಗರಿಗಳ ಆಶೀರ್ವಾಚನ ನೆರವೇರಿಸಿ ಗರಿಗಳ ಭಾನುವಾರದ ಸಂದೇಶ ನೀಡಿದರು. ಚರ್ಚ್ ಪ್ರಧಾನ ಧರ್ಮ ಗುರು ಫಾ. ಅಬೆಲ್ ಲೋಬೊ, ಅನುಗ್ರಹ ಕಾಲೇಜಿನ ಪ್ರಾಂಶುಪಾಲ ಫಾದರ್ ವಿಜಯ್ ಲೋಬೊ, ಧರ್ಮಭಗಿನಿಯರು, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ, ಪಾಲನ ಮಂಡಳಿ ಸದಸ್ಯರು, ಸಮಸ್ತ ಕ್ರೈಸ್ತ ಭಾಂದವರು ಭಾಗವಹಿಸಿಧರು.