ಧರ್ಮಸ್ಥಳ: ಹರೀಶ್ ಪೂಂಜರವರ ನೇತೃತ್ವದಲ್ಲಿ 4ನೇ ವರ್ಷದ ವಿಷು ಕಣಿ -2025 ಕಾರ್ಯಕ್ರಮ

0

ಬೆಳ್ತಂಗಡಿ: ವಿಷು ಕಣಿ ಆಚರಣಾ ಸಮಿತಿ ಇದರ ವತಿಯಿಂದ ಶಾಸಕ ಹರೀಶ್ ಪೂಂಜರವರ ನೇತೃತ್ವದಲ್ಲಿ ನಾಲ್ಕನೇ ವರ್ಷದ ವಿಷು ಕಣಿ-2025 ಕಾರ್ಯಕ್ರಮವು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು.

ಈ ಕಾರ್ಯಕ್ರಮದಲ್ಲಿ ಕೇರಳದ ಪ್ರಸಿದ್ಧ ಚೆಂಡೆ ಬಳಗ, ಪೂಕಳಂ, ವಿವಿಧ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಧ್ಯಾಹ್ನ ವಿವಿಧ ಬಗೆಯ ಕೇರಳ ಮಾದರಿಯ ಭೋಜನದ ವ್ಯವಸ್ಥೆ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀನಿವಾಸ ರಾವ್, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ಪಾರೆಂಕಿ, ಧರ್ಮಸ್ಥಳ ಸಿಎ ಬ್ಯಾಂಕ್ ಅಧ್ಯಕ್ಷರಾದ ಪ್ರೀತಮ್, ಶಕ್ತಿಕೇಂದ್ರ ಅಧ್ಯಕ್ಷರಾದ ವಿಕ್ರಮ್, ಅಕ್ಷರ ಪ್ರಿಂಟರ್ಸ್ ಮಾಲಕರಾದ ಅನಿಲ್ ಶಿಬಾಜೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here