ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನಿಂದ 281 ಬ್ಯಾಗ್ ಸಿಮೆಂಟ್ ಗೆ ರೂ. 1,00,000/- ದೇಣಿಗೆ

0

ಬೆಳ್ತಂಗಡಿ: ಮಂಗಳೂರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಶ್ರೀ ಅರ್ಜುನ್ ಭಂಡಾರ್ಕರ್ ಇವರು ಕನ್ಯಾಡಿಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನಿರ್ಮಿಸುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕೆ 281 ಬ್ಯಾಗ್ ಸಿಮೆಂಟ್ ಗೆ ರೂ. 1,00,000/- ದ ಚೆಕ್ ನೀಡಿ ಸಹಕರಿಸಿದ್ದಾರೆ.

ಈ ಸಂಸ್ಥೆಯು ಈಗಾಗಲೇ ದಕ್ಷಿಣ ಕನ್ನಡದಾದ್ಯಂತ ಅನೇಕ ಅಸಹಾಯಕರಿಗೆ, ಅಶಕ್ತರಿಗೆ ಮತ್ತು ದುರ್ಬಲರಿಗೆ ಬೇಕಾದ ವೈದ್ಯಕೀಯ ವೆಚ್ಚವನ್ನು ನೀಡಿ ಅವರ ನೋವಿಗೆ ಸ್ಪಂದಿಸಿ ಅವರ ಬಾಳಲ್ಲಿ ಆಶಾಕಿರಣವಾಗಿದೆ. ಸೇವಾಧಾಮ ಸಂಸ್ಥೆಯ ಸಂಸ್ಥಾಪಕ ಕೆ. ವಿನಾಯಕ ರಾವ್ ಮತ್ತು ಸೇವಾಭಾರತಿಯ ಹಿರಿಯ ಪ್ರಬಂಧಕ ಚರಣ್ ಕುಮಾರ್ ಎಂ. ಇದನ್ನು ಸ್ವೀಕರಿಸಿ ಸಂಸ್ಥೆಯ ಪರವಾಗಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here