

ಗುರುವಾಯನಕೆರೆ: ಕಡು ಬಡತನದ ಬೇಗೆಯ ನಡುವೆ ಕಷ್ಠಪಟ್ಟು ಓದಿದ ಶಿರಸಿಯ ವಿದ್ಯಾರ್ಥಿನಿಯೊರ್ವಳು ಪಿಯುಸಿ ವಿಜ್ಷಾನ ವಿಭಾಗದಲ್ಲಿ ಶೇ.98 ಅಂಕಗಳಿಸುವ ಮೂಲಕ ಕೆಸರಿನಲ್ಲಿ ಅರಳಿದ ಕಮಲವಾಗಿದ್ದಾಳೆ.
ಈ ಸಾಧಕಿಯ ಹೆಸರು ಪಲ್ಲವಿ ದಿನೇಶ ನಾಯ್ಕ. ಅವಳು ಈ ಸಾಧನೆ ಮಾಡಿದ್ದು ಬೆಳ್ತಂಗಡಿ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ. ತಂದೆ ದಿನೇಶ ಹೊಟೆಲ್ ಸುಪ್ರಿಯಾ ಇಂಟರ್ ನ್ಯಾಷನಲ್ ಹೋಟೆಲ್ ಬಾರ್ ನಲ್ಲಿ ಬಂದ ಜನರಿಗೆ ಮದ್ಯ ನೀಡುವ, ಗ್ಲಾಸ್ ತೊಳೆಯುವ ಕೆಲಸ. ಈ ಕೆಲಸದಲ್ಲಿ ಬಂದ ಪುಡಿಗಾಸು ಹಣದಲ್ಲಿ ಮಗ ಮತ್ತು ಮಗಳಿಗೆ ಓದಿಸುವುದರ ಜೊತೆಗೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಹೆಂಡತಿಯನ್ನು ಸಾಕುತ್ತಿದ್ದಾನೆ. ಮಗ ಇಂಜಿನಿಯರ್ ಓದಿಸುತ್ತಿದ್ದರೇ ಮಗಳು ಇದೀಗ ಉತ್ತಮ ಅಂಕದೊಂದಿಗೆ ಪಿಯುಸಿ ಮುಗಿಸಿದ್ದಾಳೆ.
ತಂದೆ ಪಡುತ್ತಿರುವ ಕಷ್ಟವನ್ನು ಕಣ್ಣಾರೆ ಕಂಡು ಬೆಳೆಯುತ್ತಿರುವ ಮಕ್ಕಳು ಅಪ್ಪನ ಆಸೆಯಂತೆ ಉತ್ತಮವಾಗಿ ಓದಿ ದೊಡ್ಡ ಹುದ್ದೆಗೇರಿ ತಂದೆಯನ್ನು ಚೆನ್ನಾಗಿ ಇಟ್ಟುಕೊಳ್ಳುವುದರ ಜೊತೆಗೆ ತಾಯಿಗೆ ಬಂದಿರುವ ಕ್ಯಾನ್ಸರ್ ಖಾಯಿಲೆಯನ್ನು ಗುಣಪಡಿಸುವ ವಿಚಾರ ಹೊಂದಿದ್ದಾರೆ.
ಈ ನಿಟ್ಟಿನಲ್ಲಿ ಅವರು ಕಷ್ಟಪಟ್ಟು ಓದುತ್ತಿದ್ದಾರೆ. ಆದರೆ ತಂದೆಗೆ ಮಕ್ಕಳ ಆಸೆಯಂತೆ ಓದಿಸಲು ಆಗುತ್ತಿಲ್ಲ ಎನ್ನುವ ನೋವಿದೆ. ಕಾರಣ ಹಣದ ಕೊರತೆ. ಅದಕ್ಕಾಗಿ ಅವರು ಯಾವುದಾದರೂ ದಾನಿಗಳಿಗಾಗಿ ಅಂಗಲಾಚುತ್ತಿದ್ದಾರೆ. 7760777360