

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜಿನ ಕಂಪ್ಯೂಟರ್ ಅಪ್ಲಿಕೇಶನ್‌ಗಳ ಬ್ಯಾಚುಲರ್ ವಿಭಾಗ (ಬಿಸಿಎ) ತನ್ನ ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಇಂಟರ್‌ಕ್ಲಾಸ್ ಐಟಿ ಫೆಸ್ಟ್, CIPHER- 2025 ಅನ್ನು ಏ.೯ರಂದು ಯಶಸ್ವಿಯಾಗಿ ಆಯೋಜಿಸಿತು. ಭವ್ಯವಾದ ಟ್ರೋಫಿ ಬಿಡುಗಡೆ ಮಾಡುವುದರೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಬಿಸಿಎ (ಯುಜಿ ಮತ್ತು ಪಿಜಿ)ಯ ರಿಜಿಸ್ಟ್ರಾರ್ ಮತ್ತು ಮುಖ್ಯಸ್ಥ ಡಾ. ವಿನಯಚಂದ್ರ,” ಇಂಟರ್‌ಕ್ಲಾಸ್ ಚಟುವಟಿಕೆಗಳು ವಿಭಾಗದೊಳಗೆ ಕಲಿಕೆ, ನಾಯಕತ್ವ ಮತ್ತು ನಾವೀನ್ಯತೆಗೆ ಹೇಗೆ ಪ್ರೇರಣೆ ನೀಡುತ್ತವೆ ಎಂಬುದಕ್ಕೆ CIPHER 2025 ಒಂದು ಅತ್ಯುತ್ತಮ ಉದಾಹರಣೆಯಾಗಿದೆ” ಎಂದು ಹೇಳಿದರು.. ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರೊ. ಅಲೆಕ್ಸ್ ಇವಾನ್ ಸಿಕ್ವೇರಾ, ತಂಡದ ವೃತ್ತಿಪರತೆ ಮತ್ತು ದೃಷ್ಟಿಕೋನವನ್ನು ಶ್ಲಾಘಿಸಿದರು.

ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳನ್ನು, ವಿವಿಧ ಶಿಬಿರಗಳಲ್ಲಿ, ನಾಯಕತ್ವ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಬಿಸಿಎ ವಿಭಾಗದ ಮುಖ್ಯಸ್ಥ ಜನಾರ್ದನ ರಾವ್ ಡಿ, ಐಟಿ ಫೋರಂ ಸಂಯೋಜಕಿ ಹಾಗೂ ಉಪನ್ಯಾಸಕಿ ವಿಯೋಲ ಸೆರಾವೊ, ವಿದ್ಯಾರ್ಥಿ ಸಂಯೋಜಕ ವಿಲ್ಸನ್ ರೊಡ್ರಿಗಸ್, ಉಪಾಧ್ಯಕ್ಷ ವಿಲಾಸ್ ಮತ್ತು ಕಾರ್ಯದರ್ಶಿ ರಶ್ಮಿತಾ ಉಪಸ್ಥಿತರಿದ್ದರು.

ತೇಜಾದ್ರಿ ತಂಡ ಪ್ರಾರ್ಥನೆ ಸಲ್ಲಿಸಿತು. ವಿದ್ಯಾರ್ಥಿ ಸಂಯೋಜಕ ವಿಲ್ಸನ್ ರೊಡ್ರಿಗಸ್ ಸ್ವಾಗತಿಸಿದರು. ಐಟಿ ಫೋರಂನ ಕಾರ್ಯದರ್ಶಿ ರಶ್ಮಿತಾ ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿಗಳಾದ ಮೆಲಾನಿ ಮತ್ತು ಹೃತಿಕಾ ಉತ್ಸವ ಆಯೋಜನೆ ಮಾಡಿದ್ದು, ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಯಿತು, ವಿಜೇತರಿಗೆ ಟ್ರೋಫಿ ಹಾಗೂ ಪ್ರಮಾಣಪತ್ರ ನೀಡಲಾಯಿತು. ವಿದ್ಯಾರ್ಥಿನಿ ಪ್ರಣೀತಾ ವಂದಿಸಿದರು.