

ಬಳಂಜ: ವೈವಾಹಿಕ ಜೀವನದ 50 ಸಂವತ್ಸರಗಳನ್ನು ಪೂರೈಸಿದ ಬಳಂಜ ಸುವರ್ಣ ನಿಲಯದ ಪ್ರಗತಿಪರ ಕೃಷಿಕ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಮಾಜಿ ಅಧ್ಯಕ್ಷ ಸಾಂತಪ್ಪ ಸುವರ್ಣ ಮತ್ತು ವಾರಿಜ ದಂಪತಿಯ ಸುವರ್ಣ ಸಂಭ್ರಮ ಎ. 6ರಂದು ಬಳಂಜ ‘ಸುವರ್ಣ ನಿಲಯ” ಮನೆಯಲ್ಲಿ ನಡೆಯಿತು.
ಸಾಂತಪ್ಪ ಸುವರ್ಣ ಮತ್ತು ವಾರಿಜ ದಂಪತಿ ಹಾರ ಬದಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ತಾಯಿ ವೆಂಕಮ್ಮ, ಮಕ್ಕಳಾದ ಮಧುಕರ್, ಮನೋಹರ್ ಬಳಂಜ, ಮಹೇಶ್ವರ್, ಮಹೇಂದ್ರ, ಸೊಸೆಯಂದಿರಾದ ಅಮೃತ, ಲಿಖಿತ, ಅಕ್ಷಯ, ಶ್ವೇತಾ, ಮೊಮ್ಮಕ್ಕಳಾದ ದಿಯಾ ಎಂ. ಕೋಟ್ಯಾನ್, ತನ್ವಿ, ತನ್ಯ, ಅಂಶ್, ಶರಣ್ಯ, ಅತ್ವಿಕ್, ಆದಿಶ್ ಅತಿಥಿಗಳನ್ನು ಸ್ವಾಗತಿಸಿ ಗೌರವಿರಸಿದರು.

ಸುವರ್ಣ ಸಂಭ್ರಮದ ಅಂಗವಾಗಿ ಬೆಳಿಗ್ಗೆ ಬಾಲ ಗಣಪತಿ ಹೋಮ, ಗಣಹೋಮ, ಲಕ್ಷ್ಮೀಹೃದಯ ಹೋಮ, ನವಗ್ರಹ ಶಾಂತಿ, ಮಧ್ಯಾಹ್ನ ಸತ್ಯ ನಾರಾಯಣ ಪೂಜೆ, ಅನ್ನ ಪ್ರಸಾದ, ಸುವರ್ಣ ಸಂಭ್ರಮ ಆಚರಣೆ, ಮನೋರಂಜನಾ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್, ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ, ಅಳದಂಗಡಿ ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ,ನಿರ್ದೇಶಕ ದೇಜಪ್ಪ ಪೂಜಾರಿ, ಬಳಂಜ ಗ್ರಾ. ಪಂ. ಉಪಾಧ್ಯಕ್ಷ ಯಶೋಧರ ಶೆಟ್ಟಿ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಪತ್ರಕರ್ತರಾದ ಬಿ.ಎಸ್.ಕುಲಾಲ್, ದೇವಿಪ್ರಸಾದ್, ತುಕರಾಮ್ ಬಿ. ಚೈತೇಶ್ ಇಳಂತಿಲ, ಗಣೇಶ್ ಬಿ. ಶಿರ್ಲಾಲು, ಜಾರಪ್ಪ ಪೂಜಾರಿ ಬೆಳಾಲು, ದೀಪಕ್ ಅಠವಳೆ, ಮನೀಶ್, ಕಂದಾಯ ಇಲಾಖೆ ಸಿಬ್ಬಂದಿ ಪರಮೇಶ್, ಉದ್ಯಮಿಗಳಾದ ಅಶ್ವಥ್ ಹೆಗ್ಡೆ, ಭರತ್ ಶೆಟ್ಟಿ ಮಂಗಳೂರು, ವಿನಯಚಂದ್ರ ಕೆನರಾ ಸ್ಟೈನ್‌ಲೆಸ್, ಪ್ರಗತಿಪರ ಕೃಷಿಕ ಸತೀಶ್ ರೈ ಬಾರ್ದಡ್ಕ, ಪ್ರವೀಣ್ ಪೂಜಾರಿ ಲಾಂತ್ಯಾರು ಬಳಂಜ, ಸುಮಿತಾ ಮತ್ತು ಅಶೋಕ್ ರೈ ಪುಂಡಿಕ್ಕು ಬೆಳ್ತಂಗಡಿ, ಕೃಪಾ ಮತ್ತು ಶ್ರೀನಿವಾಸ ಸುವರ್ಣ ಸಮೃದ್ಧಿ ವಾಮಂಜೂರು, ರೂಪ ಪೆರೋಡಿ, ಶ್ರೀನಿವಾಸ್ ಪೆರೋಡಿ ಪುತ್ತೂರು. ಸರೋಜಿನಿ ಜಿನ್ನಪ್ಪ ಪೂಜಾರಿ ಪಾಲನೆ ಅಂತರ್‌ಗಂಗೆ ಶಿರ್ಲಾಲು, ಎಂ. ಮಾರಪ್ಪ ಪೂಜಾರಿ ‘ನಂದ’ ನಿವಾಸ ಮೂರ್ಜೆ, ಸುಶೀಲಾ ಮತ್ತು ಕೋಟ್ಯಪ್ಪ ಪೂಜಾರಿ ಗುರುಕೃಪಾ ಕೋಟೆ ಮನೆ ಪಾರೆಂಕಿ, ಬೇಬಿ ಚೆನ್ನಪ್ಪ ಅಂಚನ್, ಭವ್ಯ ಮತ್ತು ಸುರೇಂದ್ರ ಕುಮಾರ್ ಬೋಳ, ಮೀನಾಕ್ಷಿ ದಂಬೆತ್ತಿಮಾರ್, ವಿಜಯ ಕುಮಾರ್ ಮತ್ತು ಹರಿಣಾಕ್ಷಿ, ಪ್ರಮೋದ್ ಕುಮಾರ್ ಮತ್ತು ಭಾರತಿ ದಂಬೆತ್ತಿಮಾರು ಮುಗೇರಡ್ಕ ಹಾಗೂ ನೂರಾರು ಗಣ್ಯರು, ಬಂಧು ಮಿತ್ರರು, ಕುಟುಂಬ ವರ್ಗದವರು, ಊರವರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಆಗಮಿಸಿ ಶುಭ ಹಾರೈಸಿದರು.