

ಉಜಿರೆ: ಉಜಿರೆ ಶ್ರೀ . ಧ. ಮಂ. ಪದವಿ ಪೂರ್ವ ಕಾಲೇಜಿನ ಮಾರ್ಚ್ ತಿಂಗಳಲ್ಲಿ ನಡೆದ ಪಬ್ಲಿಕ್ ಪರೀಕ್ಷೆಗೆ ಒಟ್ಟು 1099 ವಿದ್ಯಾರ್ಥಿಗಳು ಹಾಜರಾಗಿ 1069 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ 97.27 ಫಲಿತಾಂಶ ದಾಖಲಿಸಿಕೊಂಡಿದ್ದಾರೆ.
ವಿಜ್ಞಾನ ವಿಭಾಗ: ವಿಜ್ಞಾನ ವಿಭಾಗದಲ್ಲಿ ಒಟ್ಟು 624 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 606 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 97.11 ದಾಖಲಿಸಿದ್ದಾರೆ. 162 ಉನ್ನತ ಶ್ರೇಣಿ, 411 ಪ್ರಥಮ, 32 ದ್ವಿತೀಯ, 1 ತೃತೀಯ ಶ್ರೇಣಿ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ತುಷಾರ ಬಿ.ಎಸ್. 595 ಅಂಕ ಗಳಿಸಿ ರಾಜ್ಯಕ್ಕೆ 5ನೇ ರ‍್ಯಾಂಕ್, ತಾಲೂಕಿಗೆ ಪ್ರಥಮ ಸ್ಥಾನ, ನೀತಿ ಕೆ. 591 ಅಂಕ ಗಳಿಸಿ ರಾಜ್ಯಕ್ಕೆ 9ನೇ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗ: ವಾಣಿಜ್ಯ ವಿಭಾಗದ 365 ವಿದ್ಯಾರ್ಥಿಗಳಲ್ಲಿ 357 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ 97.80 ಪಡೆದಿದ್ದಾರೆ. 107 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 216 ಪ್ರಥಮ, 30 ವಿದ್ಯಾರ್ಥಿಗಳು ದ್ವಿತೀಯ, 4 ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದ್ದಾರೆ. ಆರ್ಯ ದಿನೇಶ್ 593 ಅಂಕದೊಂದಿಗೆ ರಾಜ್ಯಕ್ಕೆ 7ನೇ ರ‍್ಯಾಂಕ್, ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕಲಾ ವಿಭಾಗ: ಕಲಾ ವಿಭಾಗದಲ್ಲಿ ಒಟ್ಟು 110 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 106 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ 96.36 ಪಡೆದುಕೊಂಡಿದ್ದಾರೆ. 19 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 57 ವಿದ್ಯಾರ್ಥಿಗಳು ಪ್ರಥಮ, 23 ವಿದ್ಯಾರ್ಥಿಗಳು ದ್ವಿತೀಯ, 7 ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದ್ದಾರೆ. ಶ್ರೇಯ 589 ಅಂಕದೊಂದಿಗೆ ರಾಜ್ಯಕ್ಕೆ 9ನೇ ರ‍್ಯಾಂಕ್ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.