

ಕರಂಬಾರು: ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಮಕ್ಕಳ ಮೆಟ್ರಿಕ್ ಮೇಳ ಕಾರ್ಯಕ್ರಮವು ಏ. 8ರಂದು ನಡೆಯಿತು.
ಕಾರ್ಯ ಕ್ರಮವನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಎಂ. ಕೆ. ಉದ್ಘಾಟಿಸಿದರು.
ಕಾರ್ಯದಲ್ಲಿ ಅಳದಂಗಡಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಎನ್. ಶೇಖರ್ ನೋಡಲಾಧಿಕಾರಿಯಾಗಿ ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ರಮೇಶ್ ಛಾವಾಣ್ ಸ್ವಾಗತಿಸಿದ್ದರು. ಶಿಕ್ಷಕಿಯರಾದ ಚೈತ್ರಾ ಮತ್ತು ಲತಾ ವರದಿ ಮಂಡಿಸಿದ್ದರು.
ಜ್ಞಾನ ದೀಪ ಶಿಕ್ಷಕ ಸದಾಶಿವ ಕಾರ್ಯ ಕ್ರಮ ನಿರೂಪಿಸಿದರು. ಕಾರ್ಯ ಕ್ರಮದಲ್ಲಿ ಸಮಿತಿಯ ಸದಸ್ಯರುಗಳು ಶಿಕ್ಷಕಿಯರಾದ ಸಾವಿತ್ರಿ ಮತ್ತು ಸೌಜನ್ಯರವರು ಸಹಕಾರ ನೀಡಿದ್ದು, ಬಿಸಿ ಊಟ ನೌಕರರು, ಶಾಲಾ ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದರು. ಸಹ ಶಿಕ್ಷಕಿ ತಸ್ಮೀಯ ಧನ್ಯವಾದಗಳು ಸಲ್ಲಿಸಿದರು